ಬುಧವಾರ, ಸೆಪ್ಟೆಂಬರ್ 18, 2019
26 °C

ಸ್ಫೋಟ: ಕಾರ್ಖಾನೆಗೆ ಲೈಸನ್ಸ್ ಇರಲಿಲ್ಲ

Published:
Updated:

ಬಟಾಲಾ (ಪಂಜಾಬ್) (ಪಿಟಿಐ): ಬುಧವಾರ ಸ್ಫೋಟ ಸಂಭವಿಸಿದ್ದ ಇಲ್ಲಿನ ಪಟಾಕಿ ತಯಾರಿಕಾ ಕಾರ್ಖಾನೆಯು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಖಾನೆಯಲ್ಲಿ ಗುರುವಾರವೂ ರಕ್ಷಣಾ ಕಾರ್ಯ ಮುಂದುವರಿದಿತ್ತು. ಸ್ಫೋಟದಲ್ಲಿ ಒಟ್ಟು 23 ಜನರು ಸತ್ತಿದ್ದು, ಇತರೆ 27 ಜನರು ಗಂಭೀರವಾಗಿ ಗಾಯಗೊಂಡಿದ್ದರು.

‘ಕಾರ್ಖಾನೆ ಅಕ್ರಮವಾಗಿ ನಡೆಯುತ್ತಿತ್ತು. ಇದರ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಇದ್ದಿದ್ದರೆ ಅದನ್ನು ಬಂದ್‌ ಮಾಡಿಸುತ್ತಿದ್ದೆ’ ಎಂದು ಬಟಾ
ಲಾದ ಪೊಲೀಸ್ ವರಿಷ್ಠಾಧಿಕಾರಿ ಒಪಿಂದರ್‌ಜಿತ್‌ ಸಿಂಗ್‌ ತಿಳಿಸಿದರು.

Post Comments (+)