ಗೋಪ್ಯತೆಯ ಪ್ರಮಾಣದ ಆಶಯ ಉಲ್ಲಂಘಿಸಿದ ಕಿರಣ್‌ ಬೇಡಿ: ಪುದುಚೇರಿ ಸಿ.ಎಂ

5

ಗೋಪ್ಯತೆಯ ಪ್ರಮಾಣದ ಆಶಯ ಉಲ್ಲಂಘಿಸಿದ ಕಿರಣ್‌ ಬೇಡಿ: ಪುದುಚೇರಿ ಸಿ.ಎಂ

Published:
Updated:
Deccan Herald

ಪುದುಚೇರಿ: ಲೆಫ್ಟನೆಂಟ್‌ ಗವರ್ನರ್‌ ಕಿರಣ್‌ ಬೇಡಿ ಅವರು ಗೋಪ್ಯತೆಯ ಪ್ರಮಾಣದ ಆಶಯವನ್ನು ಉಲ್ಲಂಘಿಸಿದ್ದಾರೆ ಎಂದು ಪುದುಚೇರಿಯ ಮುಖ್ಯಮಂತ್ರಿ ವಿ. ನಾರಾಯಣ ಸ್ವಾಮಿ ಆರೋಪಿಸಿದ್ದಾರೆ.

ಗೋಪ್ಯ ಅಧಿಕೃತ ಸಂವಹನ ವಿಚಾರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬೇಡಿ ಅವರು ಬಹಿರಂಗ ಪಡಿಸಿದ್ದಾರೆ ಎಂದೂ ಹೇಳಿದ್ದಾರೆ.

‘ಆಡಳಿತಾಧಿಕಾರಿಯಾಗಿ ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸಿರುವ ತಾವು, ಪ್ರತಿದಿನ ಅದನ್ನು ಉಲ್ಲಂಘಿಸುತ್ತಿದ್ದೀರಿ’ ಎಂದು ನಾರಾಯಣ ಸ್ವಾಮಿ ಅವರು ಕಿರಣ್‌ ಬೇಡಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಎರಡು ವರ್ಷಗಳಿಂದ ವಿವಿಧ ವಿಷಯಗಳಿಗೆ ಸಂಬಂಧಿಸಿ ನಾರಾಯಣ ಸ್ವಾಮಿ ಮತ್ತು ಕಿರಣ್‌ ಬೇಡಿ ನಡುವೆ ಕಲಹ ನಡೆಯುತ್ತಿದೆ.

’ಯಾವುದೇ ಕಲ್ಯಾಣ ಯೋಜನೆಗಳನ್ನು ನಿರ್ಬಂಧಿಸದೆ ಸಂವಿಧಾನಬದ್ಧವಾಗಿ ಕಾರ್ಯ ನಿರ್ವಹಿಸಿದರೆ ಲೆಫ್ಟನೆಂಟ್‌ ಗವರ್ನರ್‌ಗೆ  ಸಹಕಾರ ನೀಡಲು ನಾವು ಸಿದ್ಧ’ ಎಂದೂ ಮುಖ್ಯಮಂತ್ರಿ ಹೇಳಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !