ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಇಳಿಸಲು ಅನುಮತಿ ನಿರಾಕರಿಸಿದ ಬಂಗಾಳ ಸರ್ಕಾರ

7

ಯೋಗಿ ಆದಿತ್ಯನಾಥ್ ಹೆಲಿಕಾಪ್ಟರ್ ಇಳಿಸಲು ಅನುಮತಿ ನಿರಾಕರಿಸಿದ ಬಂಗಾಳ ಸರ್ಕಾರ

Published:
Updated:

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಭಾನುವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೆಲಿಕಾಪ್ಟರ್ ಇಳಿಸಲು ಅನುಮತಿ ನಿರಾಕರಿಸಿದೆ. 

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಎರಡು ಬಿಜೆಪಿ ರ‍್ಯಾಲಿಗಳಲ್ಲಿ ಯೋಗಿ ಅದಿತ್ಯನಾಥ್‌ ಪಾಲ್ಗೊಳ್ಳಬೇಕಿತ್ತು. ಉತ್ತರ ಬಂಗಾಳದ ರಾಯ್‌ಗಂಜ್ ಮತ್ತು ಬಲೂರ್‌ಘಾಟ್‌ನಲ್ಲಿ ಬಿಜೆಪಿ ರ‍್ಯಾಲಿ ಆಯೋಜಿಸಿದೆ. ಬಂಗಾಳ ಸರ್ಕಾರ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡದಿರುವುದರಿಂದ ಅವರು ರ‍್ಯಾಲಿಯಲ್ಲಿ ಭಾಗವಹಿಸುವುದು ಅನುಮಾನವಾಗಿದೆ.

ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಪೂರ್ವ ಸೂಚನೆಯಿಲ್ಲದೆ ಅನುಮತಿ ನಿರಾಕರಿಸಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಜನಪ್ರಿಯತೆ ಸಹಿಸಲಾರದೆ ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್ ಇಳಿಸಲು ಅನುಮತಿ ನಿರಾಕರಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಹಿತಿ ಕಾರ್ಯದರ್ಶಿ ಮೃತ್ಯುಂಜಯ ಕುಮಾರ್ ಹೇಳಿದ್ದಾರೆ.

ಈ ಹಿಂದೆ ಅಮಿತ್‌ ಶಾ ಅವರ ಹೆಲಿಕಾಪ್ಟರ್‌ನ್ನು ಇಳಿಸಲು ಪಶ್ಚಿಮ ಬಂಗಾಳ ಸರ್ಕಾರ ನಿರಾಕರಿಸಿತ್ತು. ಆಗ ಅಮಿತ್‌ ಶಾ ಮಾಲ್ಡಾ ಜಿಲ್ಲೆಯ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಬೇಕಿತ್ತು. ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಹೆಲಿಕಾಪ್ಟರ್‌ ಇಳಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿತ್ತು. 

ನಮ್ಮ ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮಾಡುತ್ತಿದ್ದು ಹೆಲಿಕಾಪ್ಟರ್‌ ಇಳಿಸಲು ಅನುಮತಿ ಪಡೆಯುತ್ತೇವೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್‌ ಘೋಷ್‌ ಹೇಳಿದ್ದಾರೆ. 

ಯೋಗಿ ಅದಿತ್ಯನಾಥ ಅವರು ರ‍್ಯಾಲಿಯಲ್ಲಿ ಬಾಗವಹಿಸುವುದನ್ನು ಖಚಿಪಡಿಸಿರುವ ದಿಲೀಪ್‌ ಘೋಷ್‌, ಒಂದು ಪಕ್ಷ ಅನುಮತಿ ಸಿಗದಿದ್ದರೆ, ಅವರು ಬಂಗಾಳ ಗಡಿಯಲ್ಲಿರುವ ರಾಯ್ಗನಿ ಸೇನಾ ಕ್ಯಾಂಪ್‌ಗೆ ಹೆಲಿಕಾಫ್ಟರ್‌ ಮುಖಾಂತರ ಬರಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸಮಾವೇಶಕ್ಕೆ ಬರುತ್ತಾರೆ ಎಂದು ದಿಲೀಪ್‌ ಘೋಷ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 22

  Happy
 • 1

  Amused
 • 2

  Sad
 • 0

  Frustrated
 • 7

  Angry

Comments:

0 comments

Write the first review for this !