ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನ ಮಂತ್ರಿ ಪರಿಹಾರ ನಿಧಿ ಹೆಸರಿನಲ್ಲಿ ನಕಲಿ ಅಕೌಂಟ್ ಪತ್ತೆ

Last Updated 30 ಮಾರ್ಚ್ 2020, 13:20 IST
ಅಕ್ಷರ ಗಾತ್ರ

ನವದೆಹಲಿ: ಕೊರೊನಾ ವೈರಸ್ ಭೀತಿಯಿಂದ ಈಗಾಗಲೇ ಲಾಕ್ ಡೌನ್‌ ಜಾರಿಯಲ್ಲಿರುವ ಭಾರತದಲ್ಲಿ ಹಲವು ಸಮಸ್ಯೆಗಳು ತಲೆದೋರಿವೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿನರೇಂದ್ರ ಮೋದಿ ಸಾರ್ವಜನಿಕರು ಹೇರಳವಾಗಿ ದೇಣಿಗೆ ನೀಡಿ ಎಂದು ತಮ್ಮ ಭಾಷಣದಲ್ಲಿ ಮನವಿ ಮಾಡಿದ್ದರು.

ಅಲ್ಲದೆ, ತಮ್ಮ ಬ್ಯಾಂಕ್ ವಿಳಾಸವನ್ನೂ ನೀಡಿದ್ದರು. ಆದರೆ, ಕೆಲ ಕಿಡಿಗೇಡಿಗಳು ಫೇಕ್ ಅಕೌಂಟ್ ವಿಳಾಸ ನೀಡಿ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದರುಎಂದು ಪಿಐಬಿ ತಿಳಿಸಿದೆ.

ಪ್ರೆಸ್ ಇನ್‌‌ಫರ್ಮೇಷನ್ ಬ್ಯೂರೋ ನಡೆಸಿದ ಫ್ಯಾಕ್ಟ್ ಚೆಕ್‌‌ನಲ್ಲಿ ಈ ನಕಲಿವಿಳಾಸ ನೀಡಿರುವುದು ಪತ್ತೆಯಾಗಿದೆ. ಪ್ರಧಾನಿಯವರ ಪರಿಹಾರ ನಿಧಿಯ ವಿಳಾಸ pmcares@sbiಆಗಿದೆ.

ಕಿಡಿಗೇಡಿಗಳು ಮೇಲಿನ ನಿಜವಾದ ವಿಳಾಸವನ್ನು ಮರೆಮಾಚಿ ನಕಲಿ UPI(UNITED PAYMENTS INTERFACE)ಅಕೌಂಟ್ ನೀಡಿ ಜನರನ್ನು ವಂಚಿಸುತ್ತಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT