ಶನಿವಾರ, ಫೆಬ್ರವರಿ 29, 2020
19 °C

ಜಾಮಾ ಮಸೀದಿಗೆ ಭೇಟಿ ನೀಡಿದ ಆಜಾದ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಿಹಾರ್‌ ಜೈಲಿನಿಂದ ಬಿಡುಗಡೆಗೊಂಡಿರುವ ಭೀಮ್‌ ಆರ್ಮಿ ಮುಖ್ಯಸ್ಥ ಚಂದ್ರಶೇಖರ್‌ ಆಜಾದ್‌ ಅವರು ಶುಕ್ರವಾರ ಇಲ್ಲಿನ ಜಾಮಾ ಮಸೀದಿಗೆ ಭೇಟಿ ನೀಡಿದರು.

ಸುಮಾರು 40 ನಿಮಿಷಗಳ ಕಾಲ ಮಸೀದಿಯಲ್ಲಿ ಕಳೆದ ಅವರು ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಬೆಂಬಲಿಗರು ಮತ್ತು ಸ್ಥಳೀಯರು ಅವರನ್ನು ಸುತ್ತುವರಿದಿದ್ದರು. ಪೌರತ್ವ (ತಿದ್ದುಪಡಿ) ಕಾಯಿದೆಯನ್ನು(ಸಿಎಎ) ‘ಕರಾಳ ಕಾಯಿದೆ’ ಎಂದು ಬಣ್ಣಿಸಿದ ಆಜಾದ್‌, ಅದನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ಮಸೀದಿಗೆ ತೆರಳುವುದಕ್ಕೂ ಮುನ್ನ ಅವರು ಗೋಲ್‌ ಮಾರ್ಕೆಟ್‌ ಬಳಿಯ ಭಗವಾನ್‌ ವಾಲ್ಮೀಕಿ ಮಂದಿರ ಹಾಗೂ ಗುರುದ್ವಾರ ಬಾಂಗ್ಲಾ ಸಾಹಿಬ್‌ಗೂ ಭೇಟಿ ನೀಡಿದ್ದರು.

ಇತ್ತೀಚೆಗೆ  ಸಿಎಎ ವಿರುದ್ಧ ಜಾಮಾ ಮಸೀದಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಜನರನ್ನು ಪ್ರಚೋದಿಸಿದ ಆರೋಪದಲ್ಲಿ ಆಜಾದ್‌ ಅವರನ್ನು ಪೊಲೀಸರು ಬಂಧಿಸಿದ್ದರು. ದೆಹಲಿ ನ್ಯಾಯಾಲಯವು ಬುಧವಾರ ಅವರಿಗೆ ಜಾಮೀನು ಮಂಜೂರು ಮಾಡಿ, ನಾಲ್ಕು ವಾರಗಳ ಕಾಲ ದೆಹಲಿಗೆ ಭೇಟಿ ನೀಡದಂತೆ ನಿರ್ಬಂಧ ವಿಧಿಸಿತ್ತು.

ಚುನಾವಣೆವರೆಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಬಾರದು ಎಂದೂ ಅವರಿಗೆ ಆದೇಶಿಸಿತ್ತು.

ಸಹರಾನ್‌ಪುರಕ್ಕೆ ತೆರಳುವ ಮೊದಲು ಆಜಾದ್‌ ಅವರು ಜಾಮಾ ಮಸೀದಿ ಸೇರಿದಂತೆ ಎಲ್ಲಿಗೆ ತೆರಳಲು ಬಯಸಿದರೂ ಅವರಿಗೆ ಪೊಲೀಸರು ಬೆಂಗಾವಲು ನೀಡಬೇಕೆಂದೂ ನ್ಯಾಯಾಲಯ ಸೂಚಿಸಿತ್ತು.

 

 

 

 

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು