ಸೋಮವಾರ, ಮಾರ್ಚ್ 8, 2021
22 °C

ಆರ್ಥಿಕತೆಗೆ ಮೊಟಕಿದ ಚೋಟುದ್ದ ಬೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಡಿ ಸೇದುವುದರಿಂದ ಉಂಟಾದ ಆರೋಗ್ಯದ ಸಮಸ್ಯೆಗಳಿಂದ ಭಾರತ್ಕೆ 2017ರಲ್ಲಿ ₹ 80,000 ಕೋಟಿಗೂ ಹೆಚ್ಚು ನಷ್ಟವಾಗಿದೆ. ಬೀಡಿ ಖರೀದಿಗೆ ಭಾರತೀಯರು ಮಾಡುತ್ತಿರುವ ವೆಚ್ಚದ ಬಗ್ಗೆ ಈವರೆಗೆ ಯಾವ ಅಧ್ಯಯನಗಳೂ ನಡೆದಿಲ್ಲ ಮತ್ತು ಈ ಸಂಬಂಧ ದತ್ತಾಂಶ ಲಭ್ಯವಿಲ್ಲ. ಹೀಗಾಗಿ ಆರೋಗ್ಯ ತಪಾಸಣೆ, ಆಸ್ಪತ್ರೆ ವೆಚ್ಚ, ಚಿಕಿತ್ಸಾ ವೆಚ್ಚ, ಓಡಾಟ ಮತ್ತು ಔಷಧದ ವೆಚ್ಚಗಳನ್ನು ಲೆಕ್ಕಹಾಕಿ ಈ ನಷ್ಟವನ್ನು ಅಂದಾಜು ಮಾಡಲಾಗಿದೆ.

**

ಶೇ. 81 ಬೀಡಿಯ ರೂಪದಲ್ಲಿ ತಂಬಾಕು ಸೇವಿಸುವವರ ಪ್ರಮಾಣ

₹7.2 ಕೋಟಿ ತಾವು ಬೀಡಿ ಸೇದುವವರ ಸಂಖ್ಯೆ

ಆರೋಗ್ಯದ ಸಮಸ್ಯೆಗಳು

ಬಾಯಿ/ಶ್ವಾಸಕೋಶದ ಕ್ಯಾನ್ಸರ್‌

ಕ್ಷಯ

ಶ್ವಾಸಕೋಶ ಸಂಬಂಧಿ ಖಾಯಿಲೆಗಳು

ಅಧ್ಯಯನದ ಮುಖ್ಯಾಂಶಗಳು

* ಸಿಗರೇಟ್‌ಗೆ ಹೋಲಿಸಿದರೆ ಬೀಡಿ ಮೇಲಿನ ತೆರಿಗೆ ಪ್ರಮಾಣ ಅತ್ಯಂತ ಕಡಿಮೆ ಇದೆ. ಹೀಗಾಗಿ ಬೀಡಿಯ ಬೆಲೆ ಕಡಿಮೆ. ಆದ್ದರಿಂದ ಬಹುತೇಕ ಜನರು ಇದನ್ನೇ ಸೇವಿಸುತ್ತಾರೆ

* ಸಿಗರೇಟ್‌ಗಿಂತಲೂ ಬೀಡಿಯಲ್ಲಿ ನಿಕೋಟಿನ್ ಪ್ರಮಾಣ ಹೆಚ್ಚು. ಅಲ್ಲದೆ ಬೀಡಿಯ ದಹನಶೀಲತೆ ಕಡಿಮೆ. ಹೀಗಾಗಿ ವ್ಯಸನಿಗಳು ಬೀಡಿಯ ಹೊಗೆಯನ್ನು ತೀರಾ ಒಳಗೆ ಎಳೆದುಕೊಳ್ಳುತ್ತಾರೆ. ಹೀಗಾಗಿಯೇ ಬೀಡಿ ಸೇದುವವರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚು

* ಬೀಡಿ ಸೇದುವವರು ಈಗಾಗಲೇ ಬಹಳ ಹಣವನ್ನು ವ್ಯರ್ಥಮಾಡಿದ್ದಾರೆ. ಈ ವ್ಯಸನ ಹೀಗೇ ಮುಂದುವರಿದರೆ ಈ ನಷ್ಟ ಇನ್ನಷ್ಟು ಹೆಚ್ಚುತ್ತದೆ ಮತ್ತು ಭಾರತದ ಮತ್ತಷ್ಟು ಕುಟುಂಬಗಳು ಬಡತನದತ್ತ ಸರಿಯುತ್ತವೆ

* ಬೀಡಿಯ ಮೇಲಿನ ತೆರಿಗೆಯನ್ನು ಹೆಚ್ಚಿಸಬೇಕು. ಆ ಮೂಲಕ ಬೀಡಿ ಸೇವನೆಗೆ ಕಡಿವಾಣ ಹಾಕಬಹುದು

ತೆರಿಗೆ ದರದಲ್ಲಿ ಭಾರಿ ಅಂತರ

ಶೇ. 53 ಸಿಗರೇಟ್‌ ಬೆಲೆಯಲ್ಲಿ ತೆರಿಗೆಯ ಪ್ರಮಾಣ

ಶೇ. 60 ಹೊಗೆರಹಿತ ತಂಬಾಕು ಪದಾರ್ಥಗಳ ಬೆಲೆಯಲ್ಲಿ ತೆರಿಗೆ ಪಾಲು

ಶೇ. 22ಬೀಡಿಯ ಬೆಲೆಯಲ್ಲಿ ತೆರಿಗೆ ಪ್ರಮಾಣ

(ಆಧಾರ: ಸಾರ್ವಜನಿಕ ನೀತಿ ಸಂಶೋಧನಾ ಕೇಂದ್ರದ ಅಧ್ಯಯನ ವರದಿ, ತೊಬಾಕೊ ಕಂಟ್ರೋಲ್ ಜರ್ನಲ್)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು