ಗಂಗಾ ನದಿ ರಕ್ಷಣೆಗೆ ಸಶಸ್ತ್ರ ಪಡೆ?

7
ಕರಡು ಮಸೂದೆ ಶಿಫಾರಸು

ಗಂಗಾ ನದಿ ರಕ್ಷಣೆಗೆ ಸಶಸ್ತ್ರ ಪಡೆ?

Published:
Updated:
Deccan Herald

ನವದೆಹಲಿ: ಗಂಗಾ ನದಿ ಸಂರಕ್ಷಣೆಗಾಗಿ ಸಶಸ್ತ್ರ ಪಡೆ ನಿಯೋಜಿಸಬೇಕು ಮತ್ತು ನದಿ ಮಲಿನಗೊಳಿಸುವವರನ್ನು ಬಂಧಿಸುವ, ದಂಡ ವಿಧಿಸುವ ಅಧಿಕಾರ ನೀಡಿ ನಿಯಮ ರೂಪಿಸಬೇಕು ಎಂದು ಸಲಹೆ ಮಾಡಲಾಗಿದೆ.

ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಗಿರಿಧರ್ ಮಾಳವೀಯ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ಕರಡು ಮಸೂದೆಯಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ. ಪರಿಶೀಲನೆಗೆಂದು ವಿವಿಧ ಸಚಿವಾಲಯಗಳಿಗೆ ಕರಡು ಮಸೂದೆಯನ್ನು ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘2500 ಕಿ.ಮೀ ಉದ್ದವಿರುವ ಗಂಗಾ ನದಿ ತೀರದ ರಕ್ಷಣೆ ಹಾಗೂ ಪುನರುಜ್ಜೀವನಕ್ಕೆ, ಪ್ರಸ್ತುತ ಇರುವ ಪರಿಸರ ಕಾನೂನು ಪರಿಣಾಮಕಾರಿಯಾಗಿಲ್ಲ. ರಾಷ್ಟ್ರೀಯ ಗಂಗಾ ಪುನರುಜ್ಜೀವನ ಪ್ರಾಧಿಕಾರವು ಗಂಗಾ ಸಂರಕ್ಷಣಾ ಸಶಸ್ತ್ರ ಪಡೆ (ಜಿಪಿಸಿ) ಸಿಬ್ಬಂದಿಯನ್ನು ನಿಯೋಜಿಸುತ್ತದೆ’ ಎಂದು ಹೇಳಲಾಗಿದೆ.

**

ಶಿಕ್ಷಾರ್ಹ ಚಟುವಟಿಕೆಗಳೇನು?

ಯಾವ ಚಟುವಟಿಕೆಗಳು ಶಿಕ್ಷಾರ್ಹ ಎಂದು ಕರಡು ಮಸೂದೆಯಲ್ಲಿ ಪಟ್ಟಿ ಮಾಡಲಾಗಿದೆ. ತಪ್ಪಿತಸ್ಥರಿಗೆ 2ರಿಂದ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಬೇಕು ಎಂದು ಶಿಫಾರಸು ಮಾಡಲಾಗಿದೆ.

*ವಾಣಿಜ್ಯ ಉದ್ದೇಶಗಳಿಗಾಗಿ ಮೀನುಗಾರಿಕೆ ನಡೆಸುವುದು

*ನದಿಮುಖಜ ಪ್ರದೇಶಗಳಲ್ಲಿ ಕೈಗಾರಿಕೆಗಾಗಿ ಅಂತರ್ಜಲ ಬಳಕೆ ಮಾಡುವುದು

*ನದಿ ಹರಿವಿಗೆ ತಡೆಯೊಡ್ಡುವ ನಿರ್ಮಾಣ ಚಟುವಟಿಕೆಗಳು 

*ನದಿ ಕಲುಷಿತಗೊಳಿಸುವುದು

*ಪ್ರವಾಹ ಉಂಟಾಗುವ ಸಾಧ್ಯತೆ ಇರುವ ತೀರಗಳಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುವುದು

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !