ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸೊಲೇಷನ್ ಬೋಗಿಯೊಳಗೆ ಸೆಖೆಯೇ ಸಮಸ್ಯೆ

Last Updated 22 ಜೂನ್ 2020, 15:22 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ರೋಗಿಗಳ ಚಿಕಿತ್ಸೆಗಾಗಿ ರೈಲ್ವೆ ಇಲಾಖೆ ಸಿದ್ಧಪಡಿಸಿರುವ ಐಸೊಲೇಷನ್‌ ಬೋಗಿಯೊಳಗೆ ಸೊಳ್ಳೆ ಪರದೆ, ಆಮ್ಲಜನಕದ ಸಿಲಿಂಡರ್‌ಗಳು, ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಚಾರ್ಜ್‌ ಮಾಡಲು ಬೇಕಾದ ವ್ಯವಸ್ಥೆ ಹೀಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಆದರೆ, ಬೋಗಿಯೊಳಗೆ ಬಿಸಿಲ ಧಗೆ ತಡೆಯುವುದೇ ಇಲಾಖೆಗೆ ಸವಾಲಾಗಿದೆ.

ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಚಿಕಿತ್ಸೆಗೆ ಹೆಚ್ಚಿನ ಬೆಡ್‌ಗಳ ಅಗತ್ಯತೆ ಇದ್ದ ಕಾರಣ, ರೈಲ್ವೆ ಇಲಾಖೆಯು 5,321 ಹವಾನಿಯಂತ್ರಣ ರಹಿತ ಸಾಮಾನ್ಯ ಬೋಗಿಗಳನ್ನು ಐಸೊಲೇಷನ್‌ ಬೋಗಿಗಳಾಗಿ ಪರಿವರ್ತಿಸಿತ್ತು. ಈ ಪೈಕಿ ದೆಹಲಿಗೆ 503 ಬೋಗಿಗಳು ಹಾಗೂ ಉತ್ತರ ಪ್ರದೇಶದಕ್ಕೆ 372 ಬೋಗಿಗಳನ್ನು ರೈಲ್ವೆ ಇಲಾಖೆ ಕಳುಹಿಸಿಕೊಟ್ಟಿದೆ.

ಉತ್ತರ ಭಾರತದಲ್ಲಿ ಬಿಸಿಲ ಝಳ ಹೆಚ್ಚಿರುವ ಕಾರಣ, ಬೋಗಿಯೊಳಗೆ ರೋಗಿಗಳಿಗೆ ಹೇಗೆ ಅನುಕೂಲಕರ ವಾತಾವರಣ ಕಲ್ಪಿಸಬೇಕು ಎನ್ನುವುದು ಸವಾಲಾಗಿದೆ. ಬಿಸಿಲ ಝಳಕ್ಕೆ ಬೋಗಿಯೊಳಗೆ ತಾಪಮಾನವು 43 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುತ್ತಿದೆ.ಶೀಘ್ರದಲ್ಲೇ ಮುಂಗಾರು ಮಳೆ ಆರಂಭವಾಗಲಿ ಎಂದು ಇಲಾಖೆ ಅಧಿಕಾರಿಗಳು ಕಾಯುತ್ತಿದ್ದಾರೆ. ಇಲ್ಲವಾದಲ್ಲಿ ಐಸೊಲೇಷನ್‌ ಬೋಗಿಗಳಾಗಿ ಪರಿವರ್ತಿಸಿದ ಎಲ್ಲ ಬೋಗಿಗಳೂ ಅನವಶ್ಯಕವಾಗಿರಲಿದೆ.

ಬಿಸಿಲ ಝಳ ತಡೆಯಲು, ಕಿಟಕಿಗಳಿಗೆ ಬಿದಿರಿನಿಂದ ಮಾಡಿದ ಪರದೆ, ಬೋಗಿಯ ಮೇಲೆ ಬಿಸಿಲು ತಡೆಯಬಲ್ಲ ಬಣ್ಣ, ಬಬಲ್‌ ರ್‍ಯಾಪ್‌ ಹಾಕಲಾಗುತ್ತಿದೆ. ಜೊತೆಗೆ ಕೂಲರ್‌ಗಳನ್ನೂ ಬೋಗಿಯೊಳಗಡೆ ಅಳವಡಿಸಲಾಗುತ್ತಿದೆ. ಇಷ್ಟೆಲ್ಲ ಪ್ರಯತ್ನದ ಬಳಿಕವೂ ಬೋಗಿಯೊಳಗಿನ ತಾಪಮಾನ ಕೇವಲ 1 ಡಿಗ್ರಿ ಸೆಲ್ಸಿಯಸ್‌ ಇಳಿಕೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT