ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ಕಾಯಿನ್‌ ವಹಿವಾಟು: ಸೆರೆ

ಹೂಡಿಕೆದಾರರಿಂದ ₹52 ಕೋಟಿ ಸಂಗ್ರಹಿಸಿದ್ದ ಆರೋಪಿ
Last Updated 28 ಜೂನ್ 2019, 19:20 IST
ಅಕ್ಷರ ಗಾತ್ರ

ಹೈದರಾಬಾದ್‌(ಪಿಟಿಐ): ಆನ್‌ಲೈನ್‌ಬಿಟ್‌ಕಾಯಿನ್‌ ವಹಿವಾಟು ಹೆಸರಿನಲ್ಲಿ ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಸಾವಿರಾರು ಜನರಿಗೆ ಮೋಸ ಮಾಡಿರುವ ವ್ಯಕ್ತಿಯನ್ನು ದೆಹಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಆಶಿಶ್‌ ಮಲಿಕ್‌ ಬಂಧಿತ ವ್ಯಕ್ತಿ. ಮೋಸ ಹೋದವರು ನೀಡಿದ ದೂರಿನ ಆಧಾರದಡಿಈತನನ್ನು ವಾರೆಂಟ್‌ನಡಿ ಗುರುವಾರ ನಗರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಖ್ಯ ಆರೋಪಿಮಲಿಕ್‌ ಸೇರಿದಂತೆ ಇತರೆ ಆರೋಪಿಗಳು ನಾಲ್ಕು ವಿವಿಧ ವೆಬ್‌ಸೈಟ್‌ಗಳ ಮುಖಾಂತರ ಜನರಿಂದ ಹಣ ಸಂಗ್ರಹಿಸುತ್ತಿದ್ದರು.

ಮಲಿಕ್‌ ಒಬ್ಬನೇ ಅಂದಾಜು 1,200 ಹೂಡಿಕೆದಾರರಿಂದ ₹52 ಕೋಟಿ ಸಂಗ್ರಹಿಸಿದ್ದ. ತೆಲಂಗಾಣದ 250 ಹೂಡಿಕೆದಾರರು ಸೇರಿದಂತೆ ದಕ್ಷಿಣ ರಾಜ್ಯದಿಂದಲೇ ₹10 ಕೋಟಿ ಹೂಡಿಕೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT