ಶುಕ್ರವಾರ, ಫೆಬ್ರವರಿ 26, 2021
20 °C

ಉದ್ಯಮ ದೇಣಿಗೆ: ಬಿಜೆಪಿಗೆ ಸಿಂಹಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೇಂದ್ರದ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ನೇತೃತ್ವ ವಹಿಸಿರುವ ಬಿಜೆಪಿಗೆ 2016–17, 2017–18ನೇ ಆರ್ಥಿಕ ವರ್ಷಗಳಲ್ಲಿ ಉದ್ಯಮ ಸಂಸ್ಥೆಗಳಿಂದ ಅತ್ಯಧಿಕ ಅಂದರೆ ₹ 915.96 ಕೋಟಿ ದೇಣಿಗೆ ಸಂದಾಯವಾಗಿದೆ.

ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಆರು ರಾಜಕೀಯ ಪಕ್ಷಗಳಿಗೆ ಒಟ್ಟಾರೆ ₹ 1059.25 ಕೋಟಿ ದೇಣಿಗೆ ದೊರೆತಿದೆ. ಇದರಲ್ಲಿ ಉದ್ಯಮ ವಲಯದ ದೇಣಿಗೆಯೇ ₹ 985.18 ಕೋಟಿ. ಇದು, ಒಟ್ಟು ದೇಣಿಗೆ ಮೊತ್ತದಲ್ಲಿ ಶೇ 93 ರಷ್ಟಿದೆ. ಒಟ್ಟು ಮೊತ್ತದಲ್ಲಿ ₹ 20,000ಕ್ಕೂ ಹೆಚ್ಚಿನ ಮೊತ್ತದ ವೈಯಕ್ತಿಕ ಸಂದಾಯದ ದೇಣಿಗೆಯೂ ಸೇರಿದೆ. 

ಎರಡೂ ವರ್ಷಗಳಲ್ಲಿ ಸಂದಾಯವಾದ ದೇಣಿಗೆಯ ಅಂಕಿ ಅಂಶಗಳನ್ನು ಆಧರಿಸಿ ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್) ವಿಶ್ಲೇಷಣೆ ಮಾಡಿದ್ದು, ವರದಿ ಬಿಡುಗಡೆ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು