ಜೈಪುರ: ಸಚಿವರ ‘ಜಾತಿ’ ಹೇಳಿಕೆಗೆ ಬಿಜೆಪಿ ಆಕ್ಷೇಪ

7

ಜೈಪುರ: ಸಚಿವರ ‘ಜಾತಿ’ ಹೇಳಿಕೆಗೆ ಬಿಜೆಪಿ ಆಕ್ಷೇಪ

Published:
Updated:
Prajavani

ಜೈಪುರ: ಮೊದಲು ತಮ್ಮ ಜಾತಿಗಾಗಿ ಕೆಲಸ ಮಾಡಿ, ಬಳಿಕ ಉಳಿದ ಸಮುದಾಯಗಳತ್ತ ಗಮನ ಹರಿಸುತ್ತೇನೆ ಎಂದಿದ್ದ ರಾಜಸ್ಥಾನ ಸಚಿವೆ ಮಮತಾ ಭೂಪೇಶ್ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. 

‘ಇಂದು ಕಾಂಗ್ರೆಸ್ ಪಕ್ಷದ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮದನ್‌ಲಾಲ್ ಸೈನಿ ಟೀಕಿಸಿದ್ದಾರೆ. ‘ಕಾಂಗ್ರೆಸ್ ಪಕ್ಷದ ಆಲೋಚನೆಗೆ ಇದು ಉದಾಹರಣೆ. ಸರ್ಕಾರದಲ್ಲಿ ಜಾತಿಯ ಆಧಾರದಲ್ಲಿ ಕೆಲಸಗಳನ್ನು ಮಾಡಲು ಆಗುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ತಮ್ಮ ಸಮುದಾಯಕ್ಕೆ ನೆರವು ನೀಡಬೇಕೆಂದಿದ್ದರೆ, ಇಲಾಖೆಯಲ್ಲಿ ಹಲವು ಯೋಜನೆಗಳಿವೆ ಎಂದು ಅವರು ಸಚಿವರಿಗೆ ನೆನಪಿಸಿದ್ದಾರೆ. 

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿರುವ ಮಮತಾ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರದ ಏಕೈಕ ಮಹಿಳಾ ಸಚಿವರು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !