ಜಮ್ಮು ವಿರುದ್ಧ ತಾರತಮ್ಯ ಹೊಂದಿರುವ ಸರ್ಕಾರದ ಭಾಗವಾಗಿ ಇರಬಾರದು: ಅಮಿತ್‌ ಶಾ

7

ಜಮ್ಮು ವಿರುದ್ಧ ತಾರತಮ್ಯ ಹೊಂದಿರುವ ಸರ್ಕಾರದ ಭಾಗವಾಗಿ ಇರಬಾರದು: ಅಮಿತ್‌ ಶಾ

Published:
Updated:
ಅಮಿತ್‌ ಶಾ

ಜಮ್ಮು: ಜಮ್ಮು ವಿರುದ್ಧ ತಾರತಮ್ಯ ಹೊಂದಿರುವ ಸರ್ಕಾರದ ಒಂದು ಭಾಗವಾಗಿ ಇರಬಾರದೆಂದು ಬಿಜೆಪಿ ಹೊರ ಬಂದಿದೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ ಶಾ ಶನಿವಾರ ತಿಳಿಸಿದ್ದಾರೆ.

ಜಮ್ಮುವಿನಲ್ಲಿ ಶ್ಯಾಮ್‌ಪ್ರಸಾದ್‌ ಮುಖರ್ಜಿ ಸ್ಮರಣಾರ್ಥ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಪಿಡಿಪಿ ಸರ್ಕಾರ ಜಮ್ಮುವಿನ ಅಭಿವೃದ್ಧಿಯನ್ನು ಕಡೆಗಣಿಸಿತ್ತು. ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ 60 ಸಾವಿರ ಕೋಟಿ ರೂಪಾಯಿ ಹಣಕಾಸು ನೆರವು ನೀಡಿತ್ತು. ಸ್ವತಹ ಪ್ರಧಾನಿ ಅವರೇ ಕಾಶ್ಮಿರಕ್ಕೆ ಹಲವು ಬಾರೀ ಭೇಟಿ ನೀಡಿದ್ದರು. ಆದರೆ ಪಿಡಿಪಿ ಸರ್ಕಾರ ಜಮ್ಮು ಮತ್ತು ಲಡಾಖ್‌ ಪ್ರಾಂತ್ಯಗಳನ್ನು ಕಡೆಗಣಿಸಿತ್ತು ಎಂದು ಆಪಾದಿಸಿದರು.

ಜಮ್ಮು ಮತ್ತು  ಕಾಶ್ಮೀರಕ್ಕೆ ಎರಡು ಎಐಐಎಂಎಸ್‌ ಕೇಂದ್ರಗಳನ್ನು ಮಂಜೂರು ಮಾಡಿತ್ತು ಆದರೆ ಕಾಶ್ಮೀರ ಸರ್ಕಾರ ಜಮ್ಮುವಿನಲ್ಲಿ ಎಐಐಎಂಎಸ್‌ ಸ್ಥಾಪಿಸಲು ಭೂಮಿಯನ್ನೇ ನೀಡಲಿಲ್ಲ ಎಂದು ಅಮಿತ್‌ ಶಾ ಆರೋಪಿಸಿದರು. 

ಬಿಜೆಪಿ ದೇಶಭಕ್ತ ಪಕ್ಷವಾಗಿದೆ, ನಾವು ಅಧಿಕಾರಕ್ಕಾಗಿ ಹಪಾಹಪಿಸುವುದಿಲ್ಲ, ನಮ್ಮ ಯೋಚನೆ ರಾಜ್ಯದ ಅಭಿವೃದ್ಧಿ ಮಾತ್ರ ಎಂದು ಅಮಿತ್‌ ಶಾ ಹೇಳಿದರು. 

ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ಶ್ಯಾಮ್‌ಪ್ರಸಾದ್‌ ಮುಖರ್ಜಿ ಬಲಿದಾನವಾಗಿದ್ದಾರೆ. ಅವರು ಜೈಲಿನಲ್ಲಿ ನಿಧನರಾಗಲಿಲ್ಲ, ಅವರನ್ನು ಹತ್ಯೆ ಮಾಡಲಾಯಿತು ಎಂದು ಅಮಿತ್‌ ಶಾ ಹೇಳಿದರು. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !