ಶುಕ್ರವಾರ, ಡಿಸೆಂಬರ್ 13, 2019
26 °C

ಬಿಜೆಪಿ ಪಡೆದಿದ್ದು ₹ 700 ಕೋಟಿಗೂ ಹೆಚ್ಚು ದೇಣಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚೆಕ್‌ ಮತ್ತು ಆನ್‌ಲೈನ್‌ ಪಾವತಿ ಮೂಲಕ 2018–19ನೇ ವರ್ಷದಲ್ಲಿ ₹ 700 ಕೋಟಿಗೂ ಅಧಿಕ ಮೊತ್ತವನ್ನು ದೇಣಿಗೆಯಾಗಿ ಸ್ವೀಕರಿಸಲಾಗಿದೆ ಎಂದು ಆಡಳಿತರೂಢ ಬಿಜೆಪಿ ಘೋಷಿಸಿದೆ. ಈ ಪೈಕಿ ಅರ್ಧಕ್ಕೂ ಹೆಚ್ಚು ಮೊತ್ತವನ್ನು ಟಾಟಾ ಟ್ರಸ್ಟ್‌ ಪಾವತಿಸಿದೆ.

ಟಾಟಾ ನಿರ್ವಹಣೆಯ ಪ್ರೊಗ್ರೆಸ್ಸಿವ್‌ ಎಲೆಕ್ಟ್ರೊರಲ್ ಟ್ರಸ್ಟ್ ₹ 356 ಕೋಟಿ ದೇಣಿಗೆ ನೀಡಿದ್ದರೆ, ಸಿರಿವಂತ ಟ್ರಸ್ಟ್‌ ಆಗಿರುವ ಪ್ರುಡೆಂಟ್‌ ಎಲೆಕ್ಟ್ರೊರಲ್‌ ಟ್ರಸ್ಟ್‌ ₹ 54.25 ಕೋಟಿ ದೇಣಿಗೆ ನೀಡಿದೆ ಎಂದು ಬಿಜೆಪಿಯು ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದೆ.  

ದೇಶದ ಉನ್ನತ ಕಾರ್ಪೊರೇಟ್‌ ಸಂಸ್ಥೆಗಳಾದ ಭಾರ್ತಿ ಸಮೂಹ, ಹೀರೊ ಮೊರೊಕಾರ್ಪ್, ಜ್ಯುಬಿಲೆಂಟ್‌ ಫುಡ್‌ವರ್ಕ್ಸ್‌, ಒರಿಯಂಟ್‌ ಸಿಮೆಂಟ್, ಡಿಎಲ್‌ಎಫ್‌., ಜೆ.ಕೆ.ಟೈರ‍್ಸ್‌ ಮತ್ತು ಇತರೆ ಸಂಸ್ಥೆಗಳ ಬೆಂಬಲವನ್ನು ಪ್ರುಡೆಂಟ್‌ ಟ್ರಸ್ಟ್‌ ಹೊಂದಿದೆ.

₹20,000ಕ್ಕೂ ಮೇಲಿನ ಮೊತ್ತವನ್ನು ಚೆಕ್‌, ಆನ್‌ಲೈನ್‌ ಪಾವತಿ ಮೂಲಕ ಪಡೆಯಲಾಗಿದೆ. ಘೋಷಿಸಿರುವ ಮೊತ್ತದಲ್ಲಿ ಚುನಾವಣಾ ಬಾಂಡ್‌ಗಳ ರೂಪದಲ್ಲಿ ಪಡೆಯಲಾದ ದೇಣಿಗೆ ಸೇರಿಲ್ಲ. ಸದ್ಯದ ನಿಯಮಗಳ ಪ್ರಕಾರ, ₹20,000ಕ್ಕೂ ಕಡಿಮೆ ಮೊತ್ತದ ದೇಣಿಗೆ ನೀಡಿದವರ ಹೆಸರನ್ನು ರಾಜಕೀಯ ಪಕ್ಷಗಳು ಪ್ರಕಟಿಸಬೇಕಾಗಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು