ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುವಳ್ಳುವರ್‌ಗೆ ಕಾವಿ ತೊಡಿಸಿದ ಬಿಜೆಪಿ, ಆಕ್ರೋಶ

Last Updated 3 ನವೆಂಬರ್ 2019, 20:00 IST
ಅಕ್ಷರ ಗಾತ್ರ

ಚೆನ್ನೈ: ತಮಿಳು ಸಂತಕವಿ ತಿರುವಳ್ಳುವರ್ ಅವರು ಕಾವಿ ಧರಿಸಿರುವ ಮತ್ತು ತೋಳಿಗೆ ವಿಭೂತಿ ಇಟ್ಟಿರುವ ಚಿತ್ರವನ್ನು ತಮಿಳುನಾಡು ಬಿಜೆಪಿ ಘಟಕವು ಟ್ವೀಟ್ ಮಾಡಿದೆ. ಈ ಚಿತ್ರಕ್ಕೆ ತಮಿಳರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮಿಳುನಾಡು ಬಿಜೆಪಿಯ ಈ ಟ್ವೀಟ್‌ ವಿವಾದಕ್ಕೆ ಕಾರಣವಾಗಿದೆ.

ನವೆಂಬರ್‌ 1ರಂದು ತಮಿಳುನಾಡು ರಾಜ್ಯೋತ್ಸವದ ಅಂಗವಾಗಿ ಬಿಜೆಪಿಯು ಎರಡು ಟ್ವೀಟ್ ಮಾಡಿತ್ತು. ಒಂದು ಟ್ವೀಟ್‌ನಲ್ಲಿ ತಿರುವಳ್ಳುವರ್ ಅವರ ಚಿತ್ರವನ್ನು ಪ್ರಕಟಿಸಿತ್ತು. ಮತ್ತೊಂದು ಟ್ವೀಟ್‌ನಲ್ಲಿ ತಿರುವಳ್ಳುವರ್ ಸೇರಿದಂತೆ ತಮಿಳಿನ ಖ್ಯಾತ ಸಂತರ ಚಿತ್ರಗಳು ಚಿಕ್ಕ ಗಾತ್ರದಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಅವುಗಳ ಪಕ್ಕದಲ್ಲಿ ದೊಡ್ಡ ಗಾತ್ರದಲ್ಲಿ ಇರಿಸಿ ವಿನ್ಯಾಸ ಮಾಡಲಾದ ಪೋಸ್ಟರ್‌ ಅನ್ನು ಪ್ರಕಟಿಸಿತ್ತು.

ತಮಿಳುನಾಡು ಸರ್ಕಾರವು ರೂಪಿಸಿರುವ ತಿರುವಳ್ಳುವರ್ ಚಿತ್ರದಲ್ಲಿ ಅವರ ದಿರಿಸು ಬಣ್ಣ ಬಿಳಿ ಮತ್ತು ಹಣೆಯಲ್ಲಿ ಮಾತ್ರ ವಿಭೂತಿ ಇದೆ. ಎಲ್ಲೆಡೆ ಈ ಚಿತ್ರವನ್ನೇ ಬಳಸಲಾಗುತ್ತದೆ. ತಿರುವಳ್ಳುವರ್ ಅವರ ಚಿತ್ರವನ್ನು ಬದಲಿಸಿದ್ದಕ್ಕೆ ತಮಿಳರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದು ರಾಜಕೀಯ ವಾಗ್ಯುದ್ಧಕ್ಕೂ ಕಾರಣವಾಗಿದೆ.

ಬಿಜೆಪಿಯು ಎಲ್ಲವನ್ನೂ ಕೇಸರೀಕರಣ ಮಾಡುವುದನ್ನು ಬಿಡಬೇಕು ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.

**

ತಿರುವಳ್ಳುವರ್ ಅವರನ್ನು ಕೇಸರೀಕರಣ ಮಾಡುವುದರ ಬದಲು, ಅವರ ಬರಹಗಳನ್ನು ಓದುವ ಮೂಲಕ ಬಿಜೆಪಿ ತನ್ನನ್ನು ಸುಧಾರಿಸಿಕೊಳ್ಳಬೇಕು .
–ಎಂ.ಕೆ.ಸ್ಟಾಲಿನ್, ಡಿಎಂಕೆ ಮುಖ್ಯಸ್ಥ

**
ತಿರುವಳ್ಳುವರ್ ಅವರು ಕಾವಿ ಧರಿಸುತ್ತಿದ್ದರು. 1970ರ ದಶಕದಲ್ಲಿ ಡಿಎಂಕೆಯೇ ತಿರುವಳ್ಳುವರ್‌ ಅವರಿಗೆ ಬಿಳಿ ದಿರಿಸು ತೊಡಿಸುವ ಕೆಲಸ ಮಾಡಿತು.
–ತಮಿಳುನಾಡು ಬಿಜೆಪಿ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT