ಅಮಿತ್‌ ಜೇತ್ವಾ ಕೊಲೆ ಪ್ರಕರಣ: ಬಿಜೆಪಿ ಮಾಜಿ ಸಂಸದ ಸೇರಿ 7 ಮಂದಿ ತಪ್ಪಿತಸ್ಥರು

ಬುಧವಾರ, ಜೂಲೈ 17, 2019
23 °C

ಅಮಿತ್‌ ಜೇತ್ವಾ ಕೊಲೆ ಪ್ರಕರಣ: ಬಿಜೆಪಿ ಮಾಜಿ ಸಂಸದ ಸೇರಿ 7 ಮಂದಿ ತಪ್ಪಿತಸ್ಥರು

Published:
Updated:

ಅಹಮದಾಬಾದ್: ಆರ್‌ಟಿಐ ಕಾರ್ಯಕರ್ತ ಅಮಿತ್‌ ಜೇತ್ವಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯ ಮಾಜಿ ಸಂಸದ ದಿನು ಬೋಘಾ ಸೋಳಂಕಿ ಸೇರಿದಂತೆ ಎಲ್ಲ ಏಳು ಮಂದಿ ದೋಷಿಗಳು ಎಂಬುದಾಗಿ ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಶಿಕ್ಷೆ ಪ್ರಮಾಣವನ್ನು ಇದೇ 11 ರಂದು ಪ್ರಕಟಿಸಲಿದೆ. 

ಸೋಳಂಕಿ ಮತ್ತು ಆತನ ಸಂಬಂಧಿ ಶಿವ ಸೋಳಂಕಿಯು ಈ ಕೊಲೆಯ ಪಿತೂರಿ ನಡೆಸಿದ್ದಾಗಿ ವಿಶೇಷ ನ್ಯಾಯಾಧೀಶ ಕೆ.ಎಂ.ದವೆ ಹೇಳಿದ್ದಾರೆ. ಗುಜರಾತ್‌ ಹೈಕೋರ್ಟ್‌ನ ಹೊರಭಾಗದಲ್ಲಿ 2010ರ ಜುಲೈ 10ರಂದು ಜೇತ್ವಾ ಅವರನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.

ಜುನಾಗಢದ ಸಂಸದ ಸೋಳಂಕಿ, ಗಿರ್‌ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ ಬಗ್ಗೆ ಆರ್‌ಟಿಐ ದಾಖಲೆಗಳ ಮೂಲಕ ಜೇತ್ವಾ ಮಾಹಿತಿ ಬಹಿರಂಗಪಡಿಸಿದ್ದರು. ಅಹಮದಾಬಾದ್‌ ಅಪರಾಧ ಪತ್ತೆ ದಳ(ಡಿಸಿಬಿ) ತನಿಖೆ ನಡೆಸಿ ಆರು ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !