ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಗೆ ತೆರಳುವಂತೆ ಪರ್ರೀಕರ್ ಮೇಲೆ ಬಿಜೆಪಿ ಅನಗತ್ಯ ಒತ್ತಡ

Last Updated 25 ಅಕ್ಟೋಬರ್ 2018, 13:04 IST
ಅಕ್ಷರ ಗಾತ್ರ

ಪಣಜಿ: ಅನಾರೋಗ್ಯದಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕರ್‌ ಅವರು ಕಚೇರಿಗೆ ತೆರಳಿ ಅಧಿಕಾರ ನಡೆಸುವಂತೆ ಬಿಜೆಪಿ ಹೈಕಮಾಂಡ್‌ ಅನಗತ್ಯ ಒತ್ತಡ ಹೇರುತ್ತಿದೆ ಎಂದುಗೋವಾ ಆರ್‌ಎಸ್‌ಎಸ್‌ ಘಟಕದ ಮಾಜಿ ಅಧ್ಯಕ್ಷ ಸುಭಾಷ್‌ ವಾಲಿಂಗ್‌ಕರ್‌ ಹೇಳಿದ್ದಾರೆ.

‘ಮುಖ್ಯಮಂತ್ರಿ ಪರ್ರೀಕರ್‌ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಮತ್ತಷ್ಟು ವಿಶ್ರಾಂತಿಯ ಅಗತ್ಯವಿದ್ದರೂ, ಅವರ ಮೇಲೆ ಬಿಜೆಪಿ ಹೈಕಮಾಂಡ್‌ ಅನಗತ್ಯವಾಗಿ ಒತ್ತಡ ತರುತ್ತಿದೆ. ಯಾವುದೇ ಸಂದರ್ಭದಲ್ಲಿಯೂ ಗೋವಾದಲ್ಲಿ ಹಿಡಿತ ಬಿಗಿಗೊಳಿಸಲು ಬಯಸಿರುವ ಬಿಜೆಪಿ, ಕಚೇರಿಗೆ ಮತ್ತೆ ಬರುವಂತೆ ಒತ್ತಾಯಪಡಿಸುತ್ತಿದೆ. ಇದರಿಂದ ಅವರ ಆರೋಗ್ಯವನ್ನು ಮತ್ತಷ್ಟು ಹದಗೆಡಲಿದೆ’ ಎಂದು ದೂರಿದ್ದಾರೆ.

‘ಪರ್ರೀಕರ್‌ ಅವರು ಚೇತರಿಸಿಕೊಳ್ಳುವವರೆಗೆ ಕೇಂದ್ರವು ಗೋವಾಕ್ಕೆ ಪರ್ಯಾಯ ಮುಖ್ಯಮಂತ್ರಿಯನ್ನು ನೇಮಿಸುವುದು ಸೂಕ್ತ. ಇಲ್ಲವಾದಲ್ಲಿ ಸರ್ಕಾರ ಹೆಚ್ಚುಕಾಲ ಉಳಿಯುವುದಿಲ್ಲ. ಶೀಘ್ರದಲ್ಲೇ ಪತನವಾಗಲಿದೆ’ ಎಂದು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT