ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ವರ್ಷ ದೆಹಲಿ ವಿಧಾನಸಭೆ ಚುನಾವಣೆ| ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದ ನಡ್ಡಾ

Last Updated 29 ಜೂನ್ 2019, 10:25 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆಯ ಎಲ್ಲ ಏಳೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಸಂಭ್ರಮದಲ್ಲಿರುವ ಬಿಜೆಪಿ ರಾಜ್ಯ ಘಟಕದ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಅವರು ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿಯೂ ಪಕ್ಷ ಗೆಲುವು ಸಾಧಿಸಲಿದೆಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದೆಹಲಿಯಲ್ಲಿ ಬಿಜೆಪಿಯು ಬಿಡುವಿಲ್ಲದೆ ಶ್ರಮಿಸುತ್ತಿದೆ. ಪಕ್ಷದ ಹಿರಿಯ ನಾಯಕರು ಇಲ್ಲಿನ ಸುಮಾರು 600 ಹಳ್ಳಿಗಳನ್ನು ದತ್ತು ಪಡೆದು ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ತಳಮಟ್ಟದಿಂದ ಜನರ ಸಂಕಷ್ಟಗಳನ್ನು ಅರಿಯಲು ಪಕ್ಷದ ಸದಸ್ಯರು ಕೊಳಗೇರಿಗಳಲ್ಲಿ 21 ರಾತ್ರಿ ತಂಗಿದ್ದಾರೆ’ ಎಂದುರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಶನಿವಾರಮಾತನಾಡಿದರು

‘ಲೋಕಸಭೆ ಚುನಾವಣೆ ಸಂದರ್ಭ ನಾವು ಇಲ್ಲಿನ ಒಟ್ಟು 13 ಸಾವಿರ ಮತಕೇಂದ್ರಗಳಲ್ಲಿ 12 ಸಾವಿರಕಡೆ ಮುನ್ನಡೆ ಸಾಧಿಸಿದ್ದೇವೆ. ವಿಧಾನಸಭೆಯಲ್ಲಿಯೂ ಗೆದ್ದು ದೆಹಲಿಯಲ್ಲಿ ಈ ಬಾರಿ ಅಧಿಕಾರಕ್ಕೇರಲಿದ್ದೇವೆ’ ಎಂದರು.

‘ಪ್ರತಿಯೊಬ್ಬರೂ ವೈಯಕ್ತಿಕವಾಗಿ ಪಕ್ಷದ ಗೆಲುವಿಗಾಗಿ ಶ್ರಮಿಸಬೇಕು. ಜೊತೆಗೆ ಪಕ್ಷಕ್ಕೆ ತನ್ನಿಂದ ಏನು ಕೊಡುಗೆ ನೀಡಲು ಸಾಧ್ಯ ಎಂಬುದನ್ನುಅರಿತು ಕೊಡುಗೆ ನೀಡಬೇಕು. ಮೊದಲು ಪಕ್ಷ, ನಂತರ ನಾವು ಎಂಬುದನ್ನು ಯೋಚಿಸಿ. ಪಕ್ಷವನ್ನು ಸದೃಢವಾಗಿ ಕಟ್ಟಲು ಹಾಗೂ ರಾಜಧಾನಿಯಲ್ಲಿ ಗೆಲವು ಸಾಧಿಸುವ ಸಲುವಾಗಿ ಎಲ್ಲರೂ ಒಟ್ಟಾಗಿ ಕೆಲಸಮಾಡಿ’ ಎಂದೂ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿಬಿಜೆಪಿ ಕೈಗೊಂಡಿರುವ ಪ್ರಮುಖ ಕಾರ್ಯಕ್ರಮಗಳ ಬಗ್ಗೆಯೂ ತಿಳಿಸಿದ ನಡ್ಡಾ, ‘ವಿದ್ಯುತ್‌ ಸಂಪರ್ಕ ಹೊಂದಿರದಿದ್ದ18 ಸಾವಿರ ಹಳ್ಳಿಗಳಿಗೆ ಉಜ್ವಲಾ ಯೋಜನೆ ನೀಡಲಾಗಿದೆ. ಇದು ಸುಮಾರು 8 ಕೋಟಿ ಜನರನ್ನು ತಲುಪಿದೆ. ನವಭಾರತ ಎಂದರೆ ಇದು. ಎಲ್ಲ ಕಡೆಗಳಲ್ಲಿಯೂ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುತ್ತಿದ್ದಾರೆ. ಎಲ್ಲರೂ ರೈತರ ಬಗ್ಗೆ ಮಾತನಾಡುತ್ತಾರೆ. ಆದರೆ ಬಿಜೆಪಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಜಾರಿಗೆ ತಂದಿದೆ’ ಎಂದು ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿಜಯ್‌ ಗೋಯಲ್‌ ಹಾಗೂ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್‌ ತಿವಾರಿ ಅವರೂ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT