ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸರ್ಕಾರ ಟೀಕಿಸಿದ ಅಂಗವಿಕಲನ ಮೇಲೆ ಹಲ್ಲೆ

Last Updated 26 ಡಿಸೆಂಬರ್ 2018, 18:19 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿನ ಬಿಜೆಪಿ ಆಡಳಿತ ಟೀಕಿಸಿದ ಅಂಗವಿಕಲ ಯುವಕನ ಮೇಲೆ ಪಕ್ಷದ ನಾಯಕರೊಬ್ಬರು ಹಲ್ಲೆ ಮಾಡಿದ್ದಾರೆ.

ಸಂಭಾಲ್‌ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರಿಗೆ ಮತ ನೀಡುವುದಾಗಿ ಕೂಗುವ ಅಂಗವಿಕಲ ಯುವಕನ ಮುಖಕ್ಕೆ ಸ್ಥಳೀಯ ಬಿಜೆಪಿ ನಾಯಕ ಮೊಹಮ್ಮದ್‌ ಮಿಯಾ, ಕೋಲಿನಿಂದ ಪದೇ ಪದೇ ತಿವಿದಿದ್ದಾರೆ.

ರಸ್ತೆಯಲ್ಲಿ ಸಾಗುವಾಗ ಈ ಘಟನೆ ನಡೆದಿದೆ. ಯುವಕನನ್ನು ಬೈದು ದೂರ ಹೋಗುವಂತೆ ಹೇಳುವ ಮಿಯಾ, ಬಾಯಿಯಲ್ಲಿ ಕೋಲು ತುರುಕಿಸಲು ಸಹ ಪ್ರಯತ್ನಿಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಮ್ಮ ಕೃತ್ಯವನ್ನು ಮಿಯಾ, ಸಮರ್ಥಿಸಿಕೊಂಡಿದ್ದಾರೆ. ಆತ ಮೋದಿ ಮತ್ತು ಯೋಗಿ ಅವರನ್ನು ನಿಂದಿಸುತ್ತಿದ್ದ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT