ಶಬರಿಮಲೆ ವಿವಾದ: ಕೇರಳ ಹೈಕೋರ್ಟ್‌ನಿಂದ ಬಿಜೆಪಿ ನಾಯಕಿಗೆ ₹25 ಸಾವಿರ ದಂಡ

7
ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ್ದಕ್ಕೆ ತರಾಟೆ

ಶಬರಿಮಲೆ ವಿವಾದ: ಕೇರಳ ಹೈಕೋರ್ಟ್‌ನಿಂದ ಬಿಜೆಪಿ ನಾಯಕಿಗೆ ₹25 ಸಾವಿರ ದಂಡ

Published:
Updated:

ಕೊಚ್ಚಿ: ಕೇರಳ ಪೊಲೀಸರು ಶಬರಿಮಲೆಯಲ್ಲಿ ಭಕ್ತರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಿದ ರಾಜ್ಯ ಬಿಜೆಪಿಗೆ ಹಿನ್ನಡೆಯಾಗಿದೆ. ಆಧಾರರಹಿತ ಆರೋಪ ಮಾಡಿದ್ದಕ್ಕೆ ಮತ್ತು ನ್ಯಾಯಾಲಯದ ಸಮಯ ವ್ಯರ್ಥಗೊಳಿಸಿದ್ದಕ್ಕೆ ರಾಜ್ಯ ಬಿಜೆ‍ಪಿ ಘಟಕದ ಪ್ರಧಾನ ಕಾರ್ಯದರ್ಶಿ ಶೋಭಾ ಸುರೇಂದ್ರನ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕೇರಳ ಹೈಕೋರ್ಟ್, ₹25,000 ದಂಡ ವಿಧಿಸಿದೆ.

ಇದರ ಬೆನ್ನಲ್ಲೇ ಕ್ಷಮೆಯಾಚಿಸಿದ ಶೋಭಾ ಅವರು ಅರ್ಜಿಯನ್ನು ಹಿಂಪಡೆದಿದ್ದಾರೆ. ಅರ್ಜಿಯನ್ನು ವಾಪಸ್ ಪಡೆಯಲು ಅರ್ಜಿದಾರರು ಮುಂದಾಗಿದ್ದಾರೆ ಎಂದು ಶೋಭಾ ಪರ ವಕೀಲರು ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ನ್ಯಾಯಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಕೇರಳ ಕಾನೂನು ಸೇವೆಗಳ ಪ್ರಾಧಿಕಾರ’ಕ್ಕೆ ದಂಡ ವಿಧಿಸುವಂತೆ ಸೂಚಿಸಿತು.

ಶೋಭಾ ಅವರು ಸಲ್ಲಿಸಿದ ಅರ್ಜಿ ಆಧಾರರಹಿತವಾದದ್ದು ಮತ್ತು ಪ್ರಚಾರದ ಉದ್ದೇಶದಿಂದ ಕೂಡಿದ್ದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಪ್ರಚಾರಕ್ಕಾಗಿ ಈ ಅರ್ಜಿ ಸಲ್ಲಿಸಲಾಗಿದೆಯೇ ಎಂದೂ ಶೋಭಾ ಪರ ವಕೀಲರನ್ನು ನ್ಯಾಯಪೀಠ ಪ್ರಶ್ನಿಸಿದೆ.

ಬರಹ ಇಷ್ಟವಾಯಿತೆ?

 • 25

  Happy
 • 0

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !