ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ನೀತಿ ಸಂಹಿತೆ ಉಲ್ಲಂಘನೆ, ಬಿಜೆಪಿ ಶಾಸಕನಿಗೆ ಜೈಲು ಶಿಕ್ಷೆ 

ಪಟಾಕಿ ಸಿಡಿಸಿ, ಬೈಕ್‌ ರ‍್ಯಾಲಿ
Last Updated 29 ಮಾರ್ಚ್ 2019, 10:48 IST
ಅಕ್ಷರ ಗಾತ್ರ

ನೀಮಚ್‌ (ಮಧ್ಯಪ್ರದೇಶ):ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಬಿಜೆಪಿ ಶಾಸಕ ದಿಲೀಪ್‌ ಸಿಂಗ್‌ ಪರಿಹರ್‌ ಸೇರಿದಂತೆ ಕಾರ್ಯಕರ್ತರನ್ನುಜೈಲಿಗೆ ಕಳುಹಿಸುವಂತೆ ಸ್ಥಳೀಯ ಕೋರ್ಟ್‌ ಆದೇಶ ಹೊರಡಿಸಿದೆ.

ಮಂಡ್ಸಾರ್‌ ಕ್ಷೇತ್ರದಿಂದ ಸಂಸತ್‌ ಸದಸ್ಯರಾಗಿ ಸುಧೀರ್‌ ಗುಪ್ತಾ ಅವರಿಗೆ ಮತ್ತೆ ಪಕ್ಷದಿಂದ ಟಿಕೆಟ್‌ ಲಭಿಸಿದ್ದರಿಂದ ಶಾಸಕ ದಿಲೀಪ್‌ ಸಿಂಗ್‌ ಸೇರಿದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಬೈಕ್‌ ರ‍್ಯಾಲಿ ನಡೆಸಿ ಸಂಭ್ರಮಿಸಿದ್ದರು.

ಸಂಭ್ರಮಾಚರಣೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡ ಚುನಾವಣಾಜಾಗೃತ ದಳ (ಫ್ಲೈಯಿಂಗ್‌ ಸ್ಕ್ವಾಡ್‌) ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಜತೆಗೆ, ಸ್ಥಳಕ್ಕೆ ಧಾವಿಸಿ ಪರೀಶಿಲನೆ ನಡೆಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶಾಸಕ ದಿಲೀಪ್‌ ಸಿಂಗ್‌, ನೀಮಚ್‌ ನಗರ ಪಾಲಿಕೆ ಅಧ್ಯಕ್ಷ ರಾಕೇಶ್‌ ಜೈನ್‌, ಬಿಜೆಪಿ ಜಿಲ್ಲಾ ಮುಖಂಡ ಸಂತೋಶ್‌ ಚೋಪ್ರಾ ಸೇರಿದಂತೆ 25ಕ್ಕೂ ಹೆಚ್ಚು ಕಾರ್ಯಕರ್ತರ ವಿರುದ್ಧ ಗುರುವಾರ ಎಫ್‌ಐಆರ್‌ ದಾಖಲಿಸಿಕೊಂಡಿದ್ದರು.

ಈಗಾಗಲೇ ಲೋಕಸಭೆ ಚುನಾವಣೆಯದಿನಾಂಕ ಪ್ರಕಟವಾಗಿದ್ದು, ಏಪ್ರಿಲ್ 11ರಿಂದ ಆರಂಭವಾಗಿ ಮೇ 19ಕ್ಕೆ ಕೊನೆಗೊಳ್ಳಲಿದೆ. ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT