ತುಕ್ಡೇ ತುಕ್ಡೇ ಮನಸ್ಥಿತಿಯಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿಲ್ಲ: ಅರುಣ್ ಜೇಟ್ಲಿ

ಮಂಗಳವಾರ, ಏಪ್ರಿಲ್ 23, 2019
33 °C

ತುಕ್ಡೇ ತುಕ್ಡೇ ಮನಸ್ಥಿತಿಯಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿಲ್ಲ: ಅರುಣ್ ಜೇಟ್ಲಿ

Published:
Updated:

ನವದೆಹಲಿ: ತುಕ್ಡೇ ತುಕ್ಡೇ ಮನಸ್ಥಿತಿಯಿಂದ ಬಿಜೆಪಿ ಪ್ರಣಾಳಿಕೆ ತಯಾರಿಸಿಲ್ಲ. ರಾಷ್ಟ್ರೀಯತೆಯ ದೃಷ್ಟಿಕೋನದಿಂದಲೇ ಪ್ರಣಾಳಿಕೆ ಸಿದ್ಧಪಡಿಸಲಾಗಿದೆ ಎಂದು ಬಿಜೆಪಿ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ.

 ಈ ಸಂಕಲ್ಪ ಪತ್ರ ನೈಜತೆಯಿಂದ ಕೂಡಿದೆ ಎಂದು ಪ್ರಣಾಳಿಕೆ ಬಿಡುಗಡೆ ನಂತರ ಮಾತನಾಡಿದ ಜೇಟ್ಲಿ ಹೇಳಿದ್ದಾರೆ.

ನಮ್ಮ ಹೊಸ ನೀತಿ, ಭಯೋತ್ಪಾದನೆ ವಿರುದ್ಧ ತೆಗೆದುಕೊಂಡ ಕ್ರಮಗಳನ್ನ ಜಗತ್ತೇ ಅಂಗೀಕರಿಸಿದೆ. ಜಮ್ಮು ಕಾಶ್ಮೀರದ ಜನರಿಗೆ ವಿಶೇಷ  ಹಕ್ಕು-ಸೌಲಭ್ಯಗಳನ್ನು ನೀಡುವ ಆರ್ಟಿಕಲ್ 35Aಯನ್ನು ಅಧಿಕೃತವಾಗಿ ತೆಗೆದು ಹಾಕಲು ನಾನು ಬದ್ಧರಾಗಿದ್ದೇವೆ. 35 ಎ ಪರಿಚ್ಛೇದವು ಜಮ್ಮು ಕಾಶ್ಮೀರದಲ್ಲಿರುವ ಕಾಯಂ ಅಲ್ಲದ ನಿವಾಸಿಗಳಿಗೆ ತಾರತಮ್ಯ ಮಾಡುತ್ತದೆ. ಕಳೆದ ಸರ್ಕಾರಗಳಿಗೆ ಒಂದೇ ಒಂದು ಘೋಷಣೆ ಇತ್ತು. ಆದರೆ ಮೋದಿ ನೇತೃತ್ವದ ಸರ್ಕಾರವು ಬಡವರಿಗೆ ಸಂಪನ್ಮೂಲಗಳನ್ನು ನೀಡಿದೆ. ಮುಂದಿನ 5 ವರ್ಷಗಳಲ್ಲಿ ಬಡತನವನ್ನು ಒಂದಂಕಿಗೆ ಇಳಿಸಿ ಆಮೇಲೆ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಉದ್ದೇಶ ಈ ಪ್ರಣಾಳಿಕೆಯಲ್ಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !