ಶುಕ್ರವಾರ, ಡಿಸೆಂಬರ್ 13, 2019
27 °C
ಅಸಹಿಷ್ಣುತೆ ಇದೆ ಎನ್ನುವವರ ವಿರುದ್ಧ ಕಿಡಿ

ಭಾರತದಲ್ಲಿ ಅಸುರಕ್ಷಿತರೆನ್ನುವವರ ಮೇಲೆ ಬಾಂಬ್ ಹಾಕಬೇಕೆಂದ ಬಿಜೆಪಿ ಶಾಸಕ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಲಖನೌ: ದೇಶದಲ್ಲಿ ತಮಗೆ ಆಪತ್ತಿದೆ ಹಾಗೂ ತಾವು ಸುರಕ್ಷಿತರಲ್ಲ ಎನ್ನುವವರ ಮೇಲೆ ಬಾಂಬ್ ಹಾಕಬೇಕು ಎಂದು ಉತ್ತರ ಪ್ರದೇಶದ ಖತೌಲಿಯ ಬಿಜೆಪಿ ಶಾಸಕ ವಿಕ್ರಮ್ ಸೈನಿ ಹೇಳಿದ್ದಾರೆ.

‘ದೇಶದಲ್ಲಿ ತಾವು ಸುರಕ್ಷಿತರಲ್ಲ ಎಂದು ಭಾವಿಸುವವರ ಮೇಲೆ ಬಾಂಬ್ ಹಾಕಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ನನಗೊಂದು ಸಚಿವಸ್ಥಾನ ನೀಡಿ, ನಾನು ಅಂತಹವರ ಮೇಲೆ ಬಾಂಬ್ ಹಾಕುತ್ತೇನೆ’ ಎಂದು ಸೈನಿ ಹೇಳಿದ್ದಾರೆ.

‘ಅವರು ಅಸುರಕ್ಷಿತರೆಂದು ಭಾವಿಸುವುದಿದ್ದರೆ, ಅವರಲ್ಲಿ ರಾಷ್ಟ್ರೀಯತೆಯ ಕೊರತೆ ಇದ್ದರೆ ಅವರು ಭಾರತವನ್ನು ಬಿಟ್ಟು ತೆರಳಬಹುದು. ತಾವು ಸುರಕ್ಷಿತರೆಂದು ಭಾವಿಸು ಯಾವುದೇ ದೇಶಕ್ಕೆ ಬೇಕಾದರೂ ಹೋಗಬಹುದು’ ಎಂದು ಸೈನಿ ಹೇಳಿದ್ದಾರೆ.

ಇದೇ ಮೊದಲಲ್ಲ

ವಿಕ್ರಮ್ ಸೈನಿ ಇಂತಹ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ‘ಭಾರತವು ಹಿಂದೂಸ್ತಾನ ಎಂದು ಗುರುತಿಸಿಕೊಂಡಿರುವ ದೇಶವಾಗಿದ್ದು, ಹಿಂದೂಗಳಿಗಾಗಿ ಮಾತ್ರ ಇದೆ’ ಎಂದು ಹೇಳಿದ್ದರು. ಗೋವುಗಳಿಗೆ ಅಗೌರವ ತೋರುವವರ ಕೈ–ಕಾಲು ಮುರಿಯುವೆ ಎಂದು ಕಳೆದ ವರ್ಷ ಹೇಳಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು