ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ತಲೆ ಮೇಲಿನ ವಸ್ತ್ರ ತೆಗೆದ ಬಿಜೆಪಿ ಸಂಸದ!

Last Updated 14 ನವೆಂಬರ್ 2018, 17:08 IST
ಅಕ್ಷರ ಗಾತ್ರ

ಲಖನೌ: ಚೆಕ್‌ಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಹಿಳೆಯರು ತಲೆ ಮೇಲೆ ಧರಿಸಿದ್ದ ವಸ್ತ್ರವನ್ನು ಬಿಜೆಪಿ ಸಂಸದರೊಬ್ಬರು ತೆಗೆದುಹಾಕಿ ಅವರ ಜತೆ ಛಾಯಾಚಿತ್ರ ತೆಗೆಸಿಕೊಂಡಿದ್ದಾರೆ.

ಗೊಂಡಾ ಜಿಲ್ಲೆಯ ಕರ್ನೈಲ್‌ಗಂಜ್‌ನಲ್ಲಿ ಮಂಗಳವಾರ, ಸಂಸದ ಬ್ರಿಜ್‌ಭೂಷಣ್ ಶರಣ್‌ ಅವರು ಪ್ರಧಾನ ಮಂತ್ರಿ ವಸತಿ ಯೋಜನೆಗೆ ಸಂಬಂಧಿಸಿದ ಚೆಕ್‌ಗಳನ್ನು ವಿತರಿಸುವ ಮುನ್ನ ಮಹಿಳೆಯರು ತಲೆ ಮೇಲೆ ಹಾಕಿಕೊಂಡಿದ್ದ ವಸ್ತ್ರವನ್ನು ತೆಗೆದು ಹಾಕಿದರು. ಬಳಿಕ ಛಾಯಾಗ್ರಹಕರಿಗೆ ಸೂಚನೆ ನೀಡಿ ಅವರ ಜತೆ ಛಾಯಾಚಿತ್ರ ತೆಗೆಸಿಕೊಂಡರು. ಒಬ್ಬ ಮಹಿಳೆ ವಸ್ತ್ರವನ್ನು ಮತ್ತೆ ಮುಚ್ಚಿಕೊಂಡರೂ ಸಂಸದರು ಪಟ್ಟು ಬಿಡದೆ ತೆಗೆದು ಹಾಕಿದರು. ಮಹಿಳೆಯರಿಗೆ ಇಷ್ಟವಿಲ್ಲದಿದ್ದರೂ ಹಸ್ತಲಾಘವ ಮಾಡಿದರು. ಸಂಸದರ ಈ ನಡವಳಿಕೆ ಮಹಿಳೆಯರಿಗೆ ಅಚ್ಚರಿ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT