ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಪಾಕ್‌ಗೆ ಐ ಲವ್ಯೂ ಅಂತೀರಿ, ನಾವು ಬುಲೆಟ್‌ನಿಂದ ಉತ್ತರಿಸುತ್ತೇವೆ: ಅಮಿತ್ ಶಾ

Last Updated 22 ಏಪ್ರಿಲ್ 2019, 12:58 IST
ಅಕ್ಷರ ಗಾತ್ರ

ಕೋಲ್ಕತ್ತ: ಅಲ್ಪ ಸಂಖ್ಯಾತರ ವೋಟ್ ಬ್ಯಾಂಕ್‌ ಮೇಲೆ ಕಣ್ಣಿಟ್ಟು ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯನ್ನು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟೀಕಿಸಿದ್ದಾರೆ.

ನಿಮಗೆ ಪಾಕಿಸ್ತಾನದೊಂದಿಗೆ ಇಲೂ ಇಲೂ (ILU, ILU- I LOVE YOU) ಮಾಡಬೇಕಿದ್ದರೆ ಮಾಡಿ, ಆದರೆ ನಾವುಪಾಕಿಸ್ತಾನಕ್ಕೆ ಬುಲೆಟ್‌ನಿಂದಲೇ ಉತ್ತರಿಸುತ್ತೇವೆ ಎಂದಿದ್ದಾರೆ ಶಾ.

ಸೋಮವಾರ ಕೃಷ್ಣಾನಗರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶಾ, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಅರ್ಟಿಕಲ್ 370ನ್ನು ನಾವು ರದ್ದು ಮಾಡುತ್ತೇವೆ ಮತ್ತು ದೇಶದೆಲ್ಲೆಡೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ42 ಸೀಟುಗಳಲ್ಲಿ 23ಕ್ಕಿಂತಲೂ ಹೆಚ್ಚು ಸೀಟುಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮತಯಾಚಿಸಿದ ಶಾ, ಬಂಗಾಳದಲ್ಲಿ 90 ದಿನಗಳೊಳಗೆ ಅಧಿಕಾರಶಾಹಿ ಕೊನೆಯಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT