ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್ ವಿದೇಶ ಪ್ರವಾಸದ ‘ಗುಟ್ಟು’ ರಟ್ಟಿಗೆ ಬಿಜೆಪಿ ಪಟ್ಟು

Last Updated 31 ಅಕ್ಟೋಬರ್ 2019, 19:49 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಾಗ್ಗೆ ಕೈಗೊಳ್ಳುವವಿದೇಶ ಪ್ರವಾಸಗಳನ್ನು ಬಿಜೆಪಿ ಟೀಕಿಸಿದೆ. ‘ರಾಹುಲ್ ಅವರೇನಾದರೂ ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆಯೇ’ ಎಂದೂ ಪ್ರಶ್ನಿಸಿದೆ.

ರಾಹುಲ್ ಅವರು ಜನಪ್ರತಿನಿಧಿಯಾಗಿರುವ ಕಾರಣ ಅವರ ವಿದೇಶ ಪ್ರವಾಸಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರಬೇಕು ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್. ನರಸಿಂಹರಾವ್ ಪ್ರತಿಪಾದಿಸಿದ್ದಾರೆ. ರಾಹುಲ್ ಅವರು ಕಳೆದ ಐದು ವರ್ಷಗಳಲ್ಲಿ 16 ಬಾರಿ ವಿದೇಶಕ್ಕೆ ಹಾರಿದ್ದಾರೆ. ಈ ಹಿಂದೆ ಅವರು ಪ್ರತಿನಿಧಿಸುತ್ತಿದ್ದ ಅಮೇಠಿಗೂ ಇಷ್ಟು ಬಾರಿ ಅವರು ಭೇಟಿ ನೀಡಿರಲಿಲ್ಲ. ಅಮೇಠಿಜನರು ರಾಹುಲ್ ಅವರನ್ನು ತಿರಸ್ಕರಿಸಲು ಇದೂ ಒಂದು ಕಾರಣ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಅಮೇಠಿಯಲ್ಲಿ ಪರಾಭವಗೊಂಡಿದ್ದ ರಾಹುಲ್, ವಯನಾಡ್‌ನಿಂದ ಆಯ್ಕೆಯಾಗಿದ್ದರು.

ಸಂಸದೀಯ ವ್ಯವಹಾರಗಳ ಸಚಿವರು ಜುಲೈ 3ರಂದು ಸಂಸದರಿಗೆ ಬರೆದಿದ್ದ ಪತ್ರವನ್ನು ರಾವ್ ಉಲ್ಲೇಖಿಸಿದ್ದಾರೆ. ಸಂಸದರು ವಿದೇಶಕ್ಕೆ ತೆರಳುವುದಾದಲ್ಲಿ ಸಂಸತ್ತಿಗೆ ಮಾಹಿತಿ ನೀಡಬೇಕಿದೆ. ಖಾಸಗಿ ಪ್ರವಾಸವಾಗಿದ್ದರೂ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ನಿಯಮಾವಳಿಗಳಲ್ಲಿ ಸೂಚಿಸಲಾಗಿದೆ. ರಾಹುಲ್ ಗಾಂಧಿ ಅವರ ವಿದೇಶ ಪ್ರವಾಸದ ಬಗ್ಗೆ ಸಚಿವಾಲಯಕ್ಕೆ ಯಾವುದೇ ಮಾಹಿತಿ ಇಲ್ಲ ಎಂದು ನರಸಿಂಹ ರಾವ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT