ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರ ದೇಣಿಗೆಯಿಂದಲೇ ಪಕ್ಷ ನಡೆಯಬೇಕು: ಶಾ

Last Updated 11 ಫೆಬ್ರುವರಿ 2019, 14:35 IST
ಅಕ್ಷರ ಗಾತ್ರ

ನವದೆಹಲಿ: ’ಕಾರ್ಯಕರ್ತರು ನೀಡುವ ದೇಣಿಗೆಯಿಂದಲೇ ಪಕ್ಷದ ಎಲ್ಲ ಚಟುವಟಿಕೆಗಳು ನಡೆಯಬೇಕು‘ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಸೋಮವಾರ ತಿಳಿಸಿದ್ದಾರೆ.

ದೀನ್‌ದಯಾಳ್‌ ಉಪಾಧ್ಯಾಯ ಅವರ 51ನೇ ಪುಣ್ಯತಿಥಿ ಅಂಗವಾಗಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

’ಪಕ್ಷದ ಕಾರ್ಯಕರ್ತರು ತಮ್ಮ ದುಡಿಮೆಯ ಭಾಗದಲ್ಲಿ ಪಕ್ಷಕ್ಕೂ ದೇಣಿಗೆ ನೀಡಬೇಕು. ಪ್ರತಿ ಬೂತ್‌ನಲ್ಲಿ ಕನಿಷ್ಠ ಇಬ್ಬರು ₹1ಸಾವಿರ ಮೊತ್ತವನ್ನು ಪ್ರಧಾನಿ ನರೇಂದ್ರ ಮೋದಿ ಆ್ಯಪ್‌ ಅಥವಾ ಚೆಕ್‌ ಮೂಲಕ ನೀಡಬೇಕು‘ ಎಂದು ಅವರು ಕರೆನೀಡಿದ್ದಾರೆ.

’ನಾನು ಮತ್ತು ಪ್ರಧಾನಿ ಮೋದಿ ಅವರು ಈಗಾಗಲೇ ದೇಣಿಗೆಯನ್ನು ಸಲ್ಲಿಸಿದ್ದೇವೆ. ತಾವು ನೀಡಿದ ದೇಣಿಗೆಯಿಂದಲೇ ಪಕ್ಷ ನಡೆಯುತ್ತದೆ ಎಂಬುದನ್ನು ಕಾರ್ಯಕರ್ತರು ಹೆಮ್ಮೆಯಿಂದ ಹೇಳಿಕೊಳ್ಳಬಹುದು, ಬದಲಾಗಿ ಉದ್ಯಮಿಗಳು, ಗುತ್ತಿಗೆದಾರರು, ಕಪ್ಪುಹಣದಿಂದ ಅಲ್ಲ‘ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT