ಬಿಜೆಪಿಯೊಂದಿಗೆ ಕೈ ಜೋಡಿಸುವುದಿಲ್ಲ: ಟಿಆರ್‌ಎಸ್‌

7

ಬಿಜೆಪಿಯೊಂದಿಗೆ ಕೈ ಜೋಡಿಸುವುದಿಲ್ಲ: ಟಿಆರ್‌ಎಸ್‌

Published:
Updated:

ಹೈದರಾಬಾದ್‌: ‘ಮುಂದಿನ ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯು (ಟಿಆರ್‌ಎಸ್‌) ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಅದನ್ನು ಬೆಂಬಲಿಸುವುದೂ ಇಲ್ಲ’ ಎಂದು ಟಿಆರ್‌ಎಸ್‌ ನಾಯಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಕೆ.ಟಿ. ರಾಮರಾವ್‌ ಹೇಳಿದ್ದಾರೆ. 

‘ಟಿಆರ್‌ಎಸ್‌ ಪ್ರಾದೇಶಿಕ ಮತ್ತು ಜಾತ್ಯತೀತ ಪಕ್ಷ. ನಮ್ಮ ಮತ್ತು ಬಿಜೆಪಿ ನಡುವೆ ದೊಡ್ಡಮಟ್ಟದಲ್ಲಿ ಅಭಿಪ್ರಾಯ ಭೇದಗಳಿವೆ’ ಎಂದು ಅವರು ಹೇಳಿದ್ದಾರೆ. 

ತೆಲಂಗಾಣದ ಉಸ್ತುವಾರಿ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ಅವರ ಪುತ್ರರಾಗಿರುವ ರಾಮರಾವ್‌, ಕಾಂಗ್ರೆಸ್‌, ಟಿಡಿಪಿ ಮತ್ತು ಇತರೆ ಪಕ್ಷಗಳು ಸೇರಿ ರಚಿಸಿಕೊಂಡಿರುವ ‘ಮಹಾ ಘಟಬಂಧನ್‌’ ಮೈತ್ರಿಕೂಟವನ್ನು ‘ಮಹಾ ಘಟಿಯಾ ಬಂಧನ್‌’ (ವಂಚಕರ ಅಥವಾ ಅಪ್ರಾಮಾಣಿಕರ ಮೈತ್ರಿಕೂಟ) ಎಂದು ಟೀಕಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !