ರಮೇಶ್‌ಗೆ ಬಿಜೆಪಿ ಸಂಪರ್ಕ– ಕಾಂಗ್ರೆಸ್‌ನ ಕಟ್ಟುಕತೆ: ಶೋಭಾ

7

ರಮೇಶ್‌ಗೆ ಬಿಜೆಪಿ ಸಂಪರ್ಕ– ಕಾಂಗ್ರೆಸ್‌ನ ಕಟ್ಟುಕತೆ: ಶೋಭಾ

Published:
Updated:

ನವದೆಹಲಿ: ‘ಕೆಲವು ದಿನಗಳಿಂದ ನಾಪತ್ತೆಯಾಗಿರುವ ಶಾಸಕ ರಮೇಶ ಜಾರಕಿಹೊಳಿ ಅವರ ಪ್ರಹಸನವು ಕಾಂಗ್ರೆಸ್‌ನ ಕಟ್ಟುಕತೆ. ಅವರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಶೋಭಾ ಕರಂದ್ಲಾಜೆ ಸ್ಪಷ್ಟಪಡಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ಮುಖಂಡರು ಲೋಕಸಭೆ ಚುನಾವಣೆಯ ಕುರಿತು ಚರ್ಚೆ ನಡೆಸುತ್ತಿದ್ದಾರೆ. ಆದರೆ, ನವದೆಹಲಿಗೆ ಬಂದಿರುವ ರಮೇಶ ಜಾರಕಿಹೊಳಿ ಅವರೊಂದಿಗೆ ಅಮಿತ್‌ ಶಾ ಸಭೆ ಆಯೋಜಿಸಲಾಗುತ್ತಿದೆ ಎಂಬ ವದಂತಿ ಹರಡಿದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಅವರ ದುರಾಡಳಿತದಿಂದ ಕಾಂಗ್ರೆಸ್‌ ಶಾಸಕರು ಬೇಸತ್ತಿದ್ದಾರೆ. ಸರ್ಕಾರದ ವೈಫಲ್ಯವೂ ಕಾಂಗ್ರೆಸ್‌ ಶಾಸಕರಲ್ಲಿ ಅಸಮಾಧಾನ ಮೂಡಿಸಿದೆ. ವಿದೇಶದಲ್ಲಿ ಹೊಸ ವರ್ಷಾಚರಣೆ, ಮೋಜು, ಮಸ್ತಿಗೆ ಆದ್ಯತೆ ನೀಡುತ್ತಿರುವ ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿಯನ್ನೇ ಮರೆತಿದ್ದಾರೆ ಎಂದು ಅವರು ದೂರಿದರು.

ಭಾವನೆಗಳಿಗೆ ಧಕ್ಕೆ: ಶಬರಿಮಲೆಯ ಸ್ವಾಮಿ ಅಯ್ಯಪ್ಪ ದೇಗುಲದಲ್ಲಿ ಬುಧವಾರ ಬೆಳಗಿನ ಜಾವ ಮಹಿಳೆಯರಿಬ್ಬರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸುವ ಮೂಲಕ ಕೇರಳದ ಕಮ್ಯುನಿಸ್ಟ್‌ ಸರ್ಕಾರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಶೋಭಾ ಟೀಕಿಸಿದರು.

‘ಮಂಗಳವಾರ ಕೇರಳದಲ್ಲಿ ನಡೆದ ‘ಮಹಿಳಾ ಗೋಡೆ’ಯ ಪ್ರಹಸನವು ಸರ್ಕಾರೀ ಪ್ರಾಯೋಜಿತ. ಬುರ್ಕಾ ಧರಿಸಿದ್ದ ಮುಸ್ಲಿಂ ಮಹಿಳೆಯರೇ ಈ ಪ್ರಹಸನದಲ್ಲಿ ಪಾಲ್ಗೊಂಡಿದ್ದರು. ಶಬರಿಮಲೆ ದೇಗುಲಕ್ಕೂ ಮುಸ್ಲಿಂ ಮಹಿಳೆಯರಿಗೂ ಏನು ಸಂಬಂಧ’ ಎಂದು ಅವರು ಪ್ರಶ್ನಿಸಿದರು.

‘ಅಭಿವೃದ್ಧಿಯತ್ತ ಸಾಗಿರುವ ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಬುರ್ಕಾ ಹಾಕಿಸಲಾಗುತ್ತಿದೆ. ನಮಾಜು ಮಾಡಲು ಮಸೀದಿಗಳಿಗೆ ಅವರಿಗೆ ಅವಕಾಶವನ್ನೇ ನೀಡುತ್ತಿಲ್ಲ. ಅದನ್ನು ಹಿಂದೂಗಳು ಪ್ರಶ್ನಿಸುವುದಿಲ್ಲ’ ಎಂದೂ ಅವರು ಕೇಳಿದರು.

ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿರುವ ಸುಪ್ರೀಂ ಕೋರ್ಟ್‌ ಕೇರಳದಲ್ಲಿ ನಡೆಯುತ್ತಿರುವ ಘಟನೆಗಳ ಮಾಹಿತಿ ಪಡೆದು, ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !