ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಪೇಯಿ ಹೆಸರಲ್ಲಿ ಯೋಜನೆ: ಕರುಣಾ ಶುಕ್ಲಾ ವಿರೋಧ

Last Updated 23 ಆಗಸ್ಟ್ 2018, 16:14 IST
ಅಕ್ಷರ ಗಾತ್ರ

ರಾಯಪುರ: ವಿವಿಧ ಯೋಜನೆಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿವಾಜಪೇಯಿ ಹೆಸರು ಇಡುವ ಸರ್ಕಾರದ ನಿರ್ಧಾರಕ್ಕೆ ವಾಜಪೇಯಿ ಅವರ ಅಣ್ಣನ ಮಗಳು ಕರುಣಾ ಶುಕ್ಲಾ ವಿರೋಧ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ,ನಯಾ ರಾಯಪುರಕ್ಕೆ ‘ಅಟಲ್‌ ನಗರ್‌’, ನ್ಯಾರೊ ಗೇಜ್‌ ಎಕ್ಸ್‌ಪ್ರೆಸ್‌– ವೇಗೆ ‘ಅಟಲ್‌ ಪಥ’, ನಯಾ ರಾಯಪುರದಲ್ಲಿ ವಾಜಪೇಯಿ ಪ್ರತಿಮೆ ಅನಾವರಣ, ಪಠ್ಯ ಪುಸ್ತಕಗಳಲ್ಲಿ ವಾಜಪೇಯಿ ಜೀವನ, ಚಿಂತನೆ ಅಳವಡಿಕೆ, ವಾಜಪೇಯಿ ಹೆಸರಿನಲ್ಲಿ ಉತ್ತಮ ಆಡಳಿತಗಾರರಿಗೆ ಪ್ರಶಸ್ತಿ, ವಾಜಪೇಯಿ ಅವರ ಹುಟ್ಟು ಹಬ್ಬದಂದು ಕವಿಗಳಿಗೆ ಸನ್ಮಾನ ಸೇರಿದಂತೆ ಹಲವು ಯೋಜನೆಗಳಲ್ಲಿ ಅವರ ಹೆಸರು ಬಳಸುವ ನಿರ್ಧಾರ ಕೈಗೊಳ್ಳಲಾಗಿತ್ತು.

ಸರ್ಕಾರಿ ಯೋಜನೆಗಳಿಗೆ ಗಣ್ಯರ ಹೆಸರು ಇಡುವುದನ್ನು ಸ್ವತಹವಾಜಪೇಯಿ ಅವರೇ ಒಪ್ಪುತ್ತಿರಲಿಲ್ಲ.‘ಗ್ರಾಮೀಣ ಸಡಕ್‌ ಯೋಜನೆ’ಗೆಅಟಲ್‌ ಹೆಸರನ್ನೇ ಇಡುವಂತೆಬಿಜೆಪಿಯ ಹಲವಾರು ಮುಖಂಡರು ವಾಜಪೇಯಿ ಅವರ ಬಳಿ ಕೇಳಿಕೊಂಡಿದ್ದಾಗಲೂ ಒಪ್ಪಿರಲಿಲ್ಲವಂತೆ. ಕೊನೆಗೆ,ಪ್ರಧಾನ ಮಂತ್ರಿ ಗ್ರಾಮೀಣ ಸಡಕ್‌ ಯೋಜನೆ (ಪಿಎಂಜಿಎಸ್‌ವೈ) ಎಂದು ನಾಮಕರಣ ಮಾಡಲು ಸೂಚಿಸಿದ್ದರಂತೆ.

ಇದನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT