ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನ ಗೆಲ್ಲುವತ್ತ ಬಿಜೆಪಿ ದಾಪುಗಾಲು

7

ಮಹಾರಾಷ್ಟ್ರದಲ್ಲಿ ಹೆಚ್ಚು ಸ್ಥಾನ ಗೆಲ್ಲುವತ್ತ ಬಿಜೆಪಿ ದಾಪುಗಾಲು

Published:
Updated:

ಮುಂಬೈ : ಮಹಾರಾಷ್ಟ್ರ ವಿಧಾವ ಪರಿಷತ್‌ಗೆ ಜೂನ್‌ 16ರಂದು ಚುನಾವಣೆ ನಡೆಯಲಿದ್ದು, ಅತ್ಯಧಿಕ ಸ್ಥಾನ ಗೆಲ್ಲುವ ಪಕ್ಷವಾಗಿ ಬಿಜೆಪಿ ಹೊರಹೊಮ್ಮುವುದು ನಿಚ್ಚಳವಾಗಿದೆ.

ಒಟ್ಟು 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 78 ಸ್ಥಾನ ಬಲದ ಪರಿಷತ್ತಿನಲ್ಲಿ ಪ್ರಸ್ತುತ ಬಿಜೆಪಿ ಮತ್ತು ಎನ್‌ಸಿಪಿ ತಲಾ 20 ಸ್ಥಾನ ಹೊಂದಿದ್ದರೆ, ಕಾಂಗ್ರೆಸ್‌–18, ಸೇನಾ–11, ಪಕ್ಷೇತರರು–6 ಹಾಗೂ ಜೆಡಿಯು, ಪಿಡಬ್ಲ್ಯುಪಿ ಹಾಗೂ ಪಿಆರ್‌ಪಿ ತಲಾ 1 ಸ್ಥಾನ ಹೊಂದಿವೆ.

11 ಜನ ಸದಸ್ಯರ ಅವಧಿ ಜೂನ್‌ 27ಕ್ಕೆ ಅಂತ್ಯವಾಗಲಿದೆ. ಸಂಖ್ಯಾಬಲದ ಆಧಾರದಲ್ಲಿ ನೋಡಿದಾಗ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಅನಾಯಾಸವಾಗಿ 5 ಸ್ಥಾನಗಳನ್ನು ಗೆಲ್ಲಬಹುದಾಗಿದೆ. ಇನ್ನು, ಶಿವಸೇನಾ ಮೂರು, ಕಾಂಗ್ರೆಸ್‌ ಮತ್ತು ಎನ್‌ಸಿಪಿ ತಲಾ ಒಂದು ಸ್ಥಾನಗಳಲ್ಲಿ ಗೆಲುವು ಸಾಧಿಸಲಿವೆ.

ಒಟ್ಟು 289 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 122 ಸ್ಥಾನ ಹೊಂದಿದೆ. ಶಿವಸೇನಾ– 63, ಕಾಂಗ್ರೆಸ್‌–42, ಎನ್‌ಸಿಪಿ– 41, ಪಿಡಬ್ಲ್ಯುಪಿ–3, ಬಿವಿಎ– 3, ಎಂಐಎಂ–2, ಎಂಎನ್‌ಎಸ್‌–1, ಎಸ್‌ಪಿ, ಬಿಬಿಎಂ, ಸಿಪಿಎಂ, ಆರ್‌ಎಸ್‌ಪಿ ತಲಾ ಒಂದು ಸ್ಥಾನ ಹೊಂದಿದ್ದರೆ, ಪಕ್ಷೇತರ ಸದಸ್ಯರ ಸಂಖ್ಯೆ 7. ಆಂಗ್ಲೋ–ಇಂಡಿಯನ್‌ (ನಾಮ ನಿರ್ದೇಶಿತ) ಸದಸ್ಯರ ಸಂಖ್ಯೆ ಸಹ 1.

11 ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಪ್ರತಿಯೊಬ್ಬ ಅಭ್ಯರ್ಥಿಯ ಗೆಲುವಿಗೆ ಅಗತ್ಯವಿರುವ ಮತಗಳ ಸಂಖ್ಯೆ 25. ಬಿಜೆಪಿ–ಸೇನಾ ಹಾಗೂ ಇತರ ಪಕ್ಷಗಳನ್ನು ಒಳಗೊಂಡ ಎನ್‌ಡಿಎ ಮತಗಳ ಪಾಲು 134. ಇನ್ನು, ಕಾಂಗ್ರೆಸ್‌–ಎನ್‌ಸಿಪಿ ಮೈತ್ರಿಕೂಟದ ಮತಗಳ ಪಾಲು 92. ಹೀಗಾಗಿ ಬಿಜೆಪಿ 5 ಸ್ಥಾನಗಳನ್ನು ಅನಾಯಾಸವಾಗಿ ಗೆಲ್ಲುವ ಮೂಲಕ ಪರಿಷತ್ತಿನಲ್ಲಿ ಅಧಿಕ ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಹೊರಹೊಮ್ಮಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !