ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ: ಮಾಹಿತಿ ನೀಡಲು ಸ್ವಿಸ್ ಬ್ಯಾಂಕ್ ಒಪ್ಪಿಗೆ

ಜಿಯೊಡೆಸಿಕ್ ಸಂಸ್ಥೆ ಹಾಗೂ ಮೂವರು ವ್ಯಕ್ತಿಗಳ ಮಾಹಿತಿ
Last Updated 2 ಡಿಸೆಂಬರ್ 2018, 14:16 IST
ಅಕ್ಷರ ಗಾತ್ರ

ನವದೆಹಲಿ/ಬರ್ನ್: ಕಪ್ಪುಹಣಕ್ಕೆ ಪ್ರಶಸ್ತ ತಾಣ ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಮುಂದಾಗಿರುವ ಸ್ವಿಟ್ಜರ್ಲೆಂಡ್, ಎರಡು ಕಂಪನಿಗಳು ಹಾಗೂ ಮೂವರು ವ್ಯಕ್ತಿಗಳ ಮಾಹಿತಿಯನ್ನು ಭಾರತದ ಜೊತೆ ಹಂಚಿಕೊಳ್ಳಲು ಒಪ್ಪಿಕೊಂಡಿದೆ.

ಜಿಯೊಡೆಸಿಕ್ ಲಿಮಿಟೆಡ್ ಹಾಗೂ ಆದಿ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗಳು ಹಾಗೂಜಿಯೊಡೆಸಿಕ್ ಸಂಸ್ಥೆಗೆ ಸಂಬಂಧಿಸಿದ ಪಂಕಜ್‌ಕುಮಾರ್ ಓಂಕಾರ್ ಶ್ರೀವಾಸ್ತವ, ಪ್ರಶಾಂತ್ ಶರದ್ ಮುಲೇಕರ್ ಮತ್ತು ಕಿರಣ್ ಕುಲಕರ್ಣಿ ಅವರ ಮಾಹಿತಿಯನ್ನು ಸ್ವಿಸ್ ಬ್ಯಾಂಕ್ ನೀಡಲಿದೆ.

ಭಾರತದ ಮನವಿ ಮೇರೆಗೆ ‘ಆಡಳಿತಾತ್ಮಕ ನೆರವು’ ನೀಡುವುದಾಗಿ ಸರ್ಕಾರ ತನ್ನ ಗೆಜೆಟ್‌ನಲ್ಲಿ ಪ್ರಕಟಿಸಿದೆ. ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಸಂಬಂಧಿಸಿದ ನಿರ್ಧಿಷ್ಟ ಮಾಹಿತಿಯನ್ನು ನೀಡುವುದಿಲ್ಲ. ಆರ್ಥಿಕ ಮತ್ತು ತೆರಿಗೆ ಸಂಬಂಧಿಸಿದ ಪುರಾವೆಗಳನ್ನು ಮಾತ್ರ ಒದಗಿಸಲಿದೆ.

ಮಾಹಿತಿ ಹಂಚಿಕೊಳ್ಳುವ ಸ್ವಿಟ್ಜರ್ಲೆಂಡ್ ತೆರಿಗೆ ಪ್ರಾಧಿಕಾರದ (ಎಫ್‌ಟಿಎ) ಈ ನಿರ್ಧಾರವನ್ನು ಪ್ರಶ್ನಿಸಲು ಅವಕಾಶವಿದೆ.

ಅಸಮರ್ಪಕ ಕಾರ್ಯವಿಧಾನ ಆರೋಪದಲ್ಲಿ ಜಿಯೊಡೈಸ್ ಕಂಪೆನಿಯನ್ನು ಷೇರು ವಿನಿಮಯ ಕೇಂದ್ರವು ಅಮಾನತುಗೊಳಿಸಿತ್ತು. ಸಂಸ್ಥೆಯ ನಿರ್ದೇಶಕರ ಮೇಲೆ ಸೆಬಿ, ಜಾರಿ ನಿರ್ದೇಶನಾಲಯಗಳು ಕ್ರಮ ಜರುಗಿಸಿದ್ದವು.

2014ರಲ್ಲಿ ಚೆನ್ನೈನಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಬೆಳವಣಿಗೆ ದಾಖಲಿಸಿದ್ದ ಆದಿ ಎಂಟರ್‌ಪ್ರೈಸಸ್ ಸಂಸ್ಥೆಯು ಕಳಂಕಿತ ರಾಜಕಾರಣಿಗಳ ಜತೆಗಿನ ನಂಟು ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ತೊಂದರೆಗೆ ಸಿಲುಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT