ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂನಲ್ಲಿ ಸ್ಫೋಟ: 4 ಮಂದಿಗೆ ಗಾಯ

ಹೊಣೆ ಹೊತ್ತ ಉಲ್ಫಾ ಸಂಘಟನೆ
Last Updated 13 ಅಕ್ಟೋಬರ್ 2018, 16:03 IST
ಅಕ್ಷರ ಗಾತ್ರ

ಗುವಾಹಟಿ: ಇಲ್ಲಿನ ಶುಕ್ಲೇಶ್ವರ್‌ ಘಾಟ್‌ ಸಮೀಪ ಬಾಂಬ್‌ ಸ್ಫೋಟ ಸಂಭವಿಸಿ 4 ಮಂದಿ ಗಾಯಗೊಂಡಿದ್ದಾರೆ. ಸ್ಫೋಟದ ಹೊಣೆಯನ್ನು ಬಂಡುಕೋರ ಸಂಘಟನೆ ಉಲ್ಫಾ ಹೊತ್ತುಕೊಂಡಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಜಾರಿಯನ್ನು ಪ್ರತಿಭಟಿಸಿ ಈ ಕೃತ್ಯವೆಸಗಿರುವುದಾಗಿ ತಿಳಿಸಿದೆ.

‘ ಇಲ್ಲಿನ ಪಾನ್‌ಬಜಾರ್‌ ಪ್ರದೇಶದಲ್ಲಿರುವ ಪುಟ್‌ಪಾತ್‌ನಲ್ಲಿ ಸಮೀಪ ಹಾಕಿದ್ದ ಕಟ್ಟಡ ತ್ಯಾಜ್ಯದ ಸಮೀಪ ಬೆಳಿಗ್ಗೆ 11.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಈ ವೇಳೆ ದಾರಿಯಲ್ಲಿ ಸಾಗುತ್ತಿದ್ದ ಮಹಿಳೆ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ’ ಎಂದು ಅಸ್ಸಾಂ ಪೊಲೀಸ್‌ ಮಹಾನಿರ್ದೇಶಕ ಕುಲಾಧರ್‌ ಸೈಕಿಯಾ ತಿಳಿಸಿದರು.

‘ಎನ್‌ಆರ್‌ಸಿ ಜಾರಿ ವಿರುದ್ಧ ಪ್ರತಿಭಟನಾರ್ಥವಾಗಿ ಈ ಸ್ಫೋಟ ನಡೆಸಿದ್ದೇವೆ’ ಎಂದು ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಆಫ್‌ ಅಸ್ಸಾಂ ಸಂಘಟನೆಯ ಮುಖ್ಯಸ್ಥ ಪರೇಶ್‌ ಬರುವಾ ಒಪ್ಪಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT