ಶುಕ್ರವಾರ, ಡಿಸೆಂಬರ್ 13, 2019
26 °C

47ನೇ ಸಿಜೆಐ ಆಗಿ ಬೊಬಡೆ ಇಂದು ಪ್ರಮಾಣ ವಚನ ಸ್ವೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸುಪ್ರೀಂ ಕೋರ್ಟ್‌ನ 47ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶರದ್‌ ಅರವಿಂದ್‌ ಬೊಬಡೆ (63) ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸೇವಾ ಹಿರಿತನ ಆಧರಿಸಿ ನಿಯೋಜನೆಗೊಂಡಿರುವ ಬೊಬಡೆ ಅವರ ಅಧಿಕಾರಾವಧಿ 17 ತಿಂಗಳಾಗಿದ್ದು, 2021ರ ಏಪ್ರಿಲ್‌ 23ಕ್ಕೆ ನಿವೃತ್ತರಾಗಲಿದ್ದಾರೆ. ಭಾನುವಾರವಷ್ಟೇ ನಿವೃತ್ತಿಯಾದ ನಿಕಟಪೂರ್ವ ಸಿಜೆಐ ರಂಜನ್‌ ಗೊಗೊಯಿ ಅವರು ಬೊಬಡೆ ಹೆಸರನ್ನು ಶಿಫಾರಸು ಮಾಡಿದ್ದರು.

ನ್ಯಾಯಮೂರ್ತಿಗಳ ಕೊರತೆ ನೀಗಿಸುವ ಹಾಗೂ ನ್ಯಾಯಾಲಯಗಳಲ್ಲಿ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಗೊಗೊಯಿ ಅವರು ಕೈಗೊಂಡ ಕ್ರಮಗಳನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವುದಾಗಿ ಬೊಬಡೆ ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು