ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ಉದ್ದದ ರಸ್ತೆ– ರೈಲು ಸೇತುವೆ ಸಿದ್ಧ; ಮೋದಿ ಉದ್ಘಾಟನೆ

Last Updated 5 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ಇದೇ 25ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಬ್ರಹ್ಮಪುತ್ರಾ ನದಿಗೆ ಅಡ್ಡಲಾಗಿ ಭಾರತೀಯ ರೈಲ್ವೆ ಈ ಸೇತುವೆ ನಿರ್ಮಿಸಿದೆ. ಇದು ಏಷ್ಯಾದ ಎರಡನೇ ಅತ್ಯಂತ ಉದ್ದದ ಸೇತುವೆ

ಎಲ್ಲಿಂದ ಎಲ್ಲಿಗೆ: ಅಸ್ಸಾಂನ ದಿಬ್ರೂಗಡದಿಂದ ಅರುಣಾಚಲ ಪ್ರದೇಶದ ಪಾಸಿಘಾಟ್‌

ಉದ್ದ: 4.94 ಕಿ.ಮೀ

ಬ್ರಹ್ಮಪುತ್ರಾ ನದಿಯ ನೀರಿನ ಮಟ್ಟದಿಂದ 32 ಮೀಟರ್‌ ಎತ್ತರದಲ್ಲಿದೆ

ಸೇತುವೆ ಮೇಲ್ಭಾಗದಲ್ಲಿ ಮೂರು ಪಥಗಳ ರಸ್ತೆ

ಕೆಳಭಾಗದಲ್ಲಿ ಎರಡು ಹಳಿಗಳ ರೈಲು ಮಾರ್ಗ

**

ಅನುಷ್ಠಾನ: ಸುದೀರ್ಘ ವಿಳಂಬದ ಕತೆ

* 1997ರಲ್ಲಿ ಆಗಿನ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಂದ ಶಿಲಾನ್ಯಾಸ

* 2002ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಕಾಮಗಾರಿಗೆ ಚಾಲನೆ

* 7 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇತ್ತು

* 2007ರಲ್ಲಿ ಇದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿದ ಯುಪಿಎ ಸರ್ಕಾರ

* ಆದರೆ, ವಿವಿಧ ಕಾರಣಗಳಿಂದಾಗಿ ಕಾಮಗಾರಿ ಪೂರ್ಣಗೊಳ್ಳಲಿಲ್ಲ; 2018ರ ಮಾರ್ಚ್‌ಗೆ ಪೂರ್ಣಗೊಳಿಸುವ ಗಡುವು ಹಾಕಿಕೊಳ್ಳಲಾಗಿತ್ತು

* ಮತ್ತೆ ವಿಳಂಬವಾಗಿ ಈಗ ಕಾಮಗಾರಿ ಪೂರ್ಣಗೊಂಡಿದೆ

ಅನುಕೂಲ ಏನು?

* ದಿಬ್ರೂಗಡದಿಂದ ಅರುಣಾಚಲ ಪ್ರದೇಶಕ್ಕೆ ಹೋಗಲು ಗುವಾಹಟಿ ಮೂಲಕ ಸಾಗಬೇಕಿತ್ತು. ಈ ದೂರ 500 ಕಿ.ಮೀ.ಗೂ ಹೆಚ್ಚು. ಈ ಸೇತುವೆ ಮೂಲಕ ಸಾಗಿದರೆ ಅದು 100 ಕಿ.ಮೀ.ಗಿಂತ ಕಡಿಮೆ

* ದಿಬ್ರುಗಡದಿಂದ ದೆಹಲಿಯ ದೂರ (ಗುವಾಹಟಿ ಮೂಲಕ) 37 ತಾಸು. ಈ ಸೇತುವೆ ಮೂಲಕ ಸಾಗಿದರೆ ಅದು 3 ತಾಸು ಕಡಿಮೆ ಆಗಲಿದೆ

ವೆಚ್ಚ ಏರಿಕೆ:

ಮೂಲ ವೆಚ್ಚ: ₹1,767 ಕೋಟಿ

ಈಗಿನ ವೆಚ್ಚ: ಸುಮಾರು ₹6,000 ಕೋಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT