ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ವಿರಳ ರಕ್ತದ ಗುಂಪು 'ಬಾಂಬೆ ಬ್ಲಡ್‌'ಗೆ ಹೆಚ್ಚಿದ ಬೇಡಿಕೆ

Last Updated 9 ಸೆಪ್ಟೆಂಬರ್ 2019, 6:14 IST
ಅಕ್ಷರ ಗಾತ್ರ

ಮುಂಬೈ:ಕಳೆದ ಒಂದು ವಾರದಲ್ಲಿ ಮುಂಬೈನಲ್ಲಿರುವ ಹಲವಾರು ಆಸ್ಪತ್ರೆಗಳಲ್ಲಿ ಅತಿ ವಿರಳ ರಕ್ತದ ಗುಂಪು ಬಾಂಬೆ ಬ್ಲಡ್‌ಗೆ ಭಾರೀ ಬೇಡಿಕೆಯುಂಟಾಗಿದೆ. ಮಹಾರಾಷ್ಟ್ರದ ಇತರ ಪ್ರದೇಶಗಳಿಂದ ಮುಂಬೈನಲ್ಲಿರುವ ಆಸ್ಪತ್ರೆಗಳಿಗೆ ಈರಕ್ತ ಪೂರೈಕೆ ಮಾಡಲಾಗುತ್ತಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಕಳೆದ ವಾರ ಇಲ್ಲಿನ ನಾಯರ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ 5 ಯೂನಿಟ್ ಬಾಂಬೆ ಬ್ಲಡ್ ಅಗತ್ಯವಿತ್ತು. ಅದೇ ವೇಳೆ ಹಿಂದುಜಾ ಆಸ್ಪತ್ರೆಗೆ 2 ಯೂನಿಟ್ ಮತ್ತು ಟಾಟಾ ಮೆಮೊರಿಯಲ್ ಆಸ್ಪತ್ರೆಗೆ 2 ಯೂನಿಟ್ ಬಾಂಬೆ ರಕ್ತದ ಅಗತ್ಯ ಬಂದಿತ್ತು. ಒಂದು ವಾರದಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಪೈಕಿ 5 ರೋಗಿಗಳು ಈ ರಕ್ತದ ಗುಂಪಿನವರಾಗಿರುತ್ತಾರೆ.

ರಾಜ್ಯ ಸರ್ಕಾರದ ಬ್ಲಡ್ ಆನ್ ಕಾಲ್ ಸೇವೆ ಗಂಟೆಗಳೊಳಗೆ ಹತ್ತಿರದ ಪ್ರದೇಶಗಳಿಂದ ರಕ್ತ ಪೂರೈಕೆ ಮಾಡುತ್ತಿದ್ದರೂ, ಇನ್ನೂ ರಾಜ್ಯದಲ್ಲಿರುವ ಅನೇಕ ಪ್ರದೇಶಗಳಲ್ಲಿ ಈ ಸೆೇವೆ ಇನ್ನೂ ಆರಂಭವಾಗಿಲ್ಲ

ಏನಿದು ಬಾಂಬೆ ಬ್ಲಡ್?

1952ರಲ್ಲಿ ಮುಂಬೈಯಲ್ಲಿ (ಆಗಿನ ಬಾಂಬೆ) ಈ ರಕ್ತದ ಗುಂಪು ಪತ್ತೆಯಾಗಿತ್ತು. ಹಾಗಾಗಿ ಇದು ‘ಬಾಂಬೆ ಬ್ಲಡ್‌ ಗ್ರೂಪ್‌’ ಎಂದೇ ಹೆಸರಾಯಿತು. ಪ್ರತಿ ರಕ್ತದ ಗುಂಪಿನಲ್ಲೂ ಎಚ್‌ ಆ್ಯಂಟಿಜನ್‌ ಎಂಬುದು ಇರುತ್ತದೆ. ಸಹಜವಾಗಿಯೇ ‘ಒ’ ಗುಂಪಿನವರಲ್ಲೂ ಇರುತ್ತದೆ. ಆದರೆ ‘ಒ’ ಗುಂಪು ಹೊಂದಿರುವ ಪ್ರತಿ 17 ಸಾವಿರ ಮಂದಿಯ ಪೈಕಿ ಒಬ್ಬರಲ್ಲಿ ಎಚ್‌ ಆ್ಯಂಟಿಜನ್‌ ಇರುವುದಿಲ್ಲ. ಒಟ್ಟು ಪ್ರತಿ 10 ಲಕ್ಷಕ್ಕೆ ನಾಲ್ಕು ಮಂದಿಯಲ್ಲಿ ಇದು ಕಂಡುಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT