‘ಮರೆತು ಬಿಟ್ಟದ್ದು’ ಕವನ ಸಂಕಲನ ಬಿಡುಗಡೆ

ಬುಧವಾರ, ಮಾರ್ಚ್ 20, 2019
31 °C

‘ಮರೆತು ಬಿಟ್ಟದ್ದು’ ಕವನ ಸಂಕಲನ ಬಿಡುಗಡೆ

Published:
Updated:
Prajavani

ಕೆ.ಎಂ. ವಸುಂಧರಾ ಅವರ ಚೊಚ್ಚಲ ಕೃತಿ ‘ಮರೆತು ಬಿಟ್ಟದ್ದು’ ಕವನ ಸಂಕಲನದ ಬಿಡುಗಡೆ ಸಮಾರಂಭ ಶನಿವಾರ ಬೆಳಿಗ್ಗೆ 10.30ಕ್ಕೆ ನಯನ ಸಭಾಂಗಣದಲ್ಲಿ ನಡೆಯಲಿದೆ. ಸ್ತ್ರೀ ಪ್ರಜ್ಞೆಯ ನೆಲೆಯಲ್ಲಿ ಸೂಕ್ಷ್ಮಸಂವೇದನೆಯ ಒಟ್ಟು 49 ಕವಿತೆಗಳ ಈ ಸಂಕಲನವನ್ನು ಸಂಹಿತಾ ಪ್ರಕಾಶನ ಹೊರತಂದಿದೆ.

ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಕೆ.ಎಂ ವಸುಂಧರಾ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕಿ.

ಲೋಕಾರ್ಪಣೆ: ಪ್ರೊ. ಜಯಪ್ರಕಾಶ ಗೌಡ, ಪುಸ್ತಕ ಪರಿಚಯ–ಡಾ. ಗೀತಾ ವಸಂತ, ಅತಿಥಿಗಳು:
ಡಾ. ಕೆ.ವೈ. ನಾರಾಯಣ ಸ್ವಾಮಿ, ಎಸ್‌. ಗಂಗಾಧರಯ್ಯ.

ಶನಿವಾರ ಬೆಳಿಗ್ಗೆ 10.30ಕ್ಕೆ. ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ ರಸ್ತೆ. 

**
ಪುಸ್ತಕ ಬಿಡುಗಡೆ, ಸಂವಾದ

ಜೈನ್‌ ವಿಶ್ವವಿದ್ಯಾಲಯದಲ್ಲಿ ಶನಿವಾರ ‘ಹೌ ಇಂಡಿಯಾ ವೋಟ್ಸ್‌– ಸ್ಟೇಟ್‌ ಬೈ ಸ್ಟೇಟ್‌ ಲುಕ್‌’ ಪುಸ್ತಕದ ಬಿಡುಗಡೆ ಹಾಗೂ ಸಂವಾದವನ್ನು ಶನಿವಾರ ಆಯೋಜಿಸಿದೆ.

ಓರಿಯಂಟ್‌ ಬ್ಲ್ಯಾಕ್‌ಸ್ವ್ಯಾನ್‌ ಪ್ರಕಾಶನದ ಕೃತಿ ಇದಾಗಿದೆ. ಸಂಪಾದಕರು ಡಾ. ಅಶುತೋಶ್‌ ಕುಮಾರ್‌ ಮತ್ತು ಡಾ. ಯತೀಂದ್ರ ಸಿಂಗ್‌ ಸಿಸೋಡಿಯಾ. ಕೃತಿಯಲ್ಲಿನ ಒಟ್ಟು 24 ಲೇಖನಗಳು 2014ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳ ಮತದಾನದ ಬಗ್ಗೆ ಸೂಕ್ಷ್ಮ ಒಳನೋಟಗಳನ್ನು ಕಟ್ಟಿಕೊಟ್ಟಿವೆ. ಜೈನ್‌ ಯುನಿವರ್ಸಿಟಿ ಟ್ರಸ್ಟ್‌ ಅಧ್ಯಕ್ಷ ಡಾ. ಚನರಾಜ್‌ ರಾಯ್‌ಚಂದ್‌ ಕೃತಿಯನ್ನು ಬಿಡುಗಡೆ ಮಾಡುವರು.

ಬಳಿಕ ‘2014ರಿಂದ 2019: ಚುನಾವಣಾ ಬೆಳವಣಿಗೆಗಳು’ ಕುರಿತು ಸಂವಾದ ನಡೆಯಲಿದೆ. ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಪ್ರೊ.ಸುಧೀರ್‌ ಕೃಷ್ಣಸ್ವಾಮಿ, ಪತ್ರಕರ್ತ ಟಿ.ಎಂ. ವೀರರಾಘವ್‌, ಲೋಕನೀತಿಯ ಸಹ ನಿರ್ದೇಶಕ ಡಾ. ಸುಹಾಸ್‌ ಪಾಲ್ಶಿಕರ್‌ ಚರ್ಚೆಯಲ್ಲಿ ಬಾಗವಹಿಸುವರು. ನಿರ್ವಹಣೆ– ಜೈನ್‌ ವಿಶ್ವವಿದ್ಯಾಲಯದ ಸಮ ಕುಲಾಧಿಪತಿ ಡಾ. ಸಂದೀಪ್‌ ಶಾಸ್ತ್ರಿ.

ಸ್ಥಳ: ಕಾನ್ಫರೆನ್ಸ್‌ ಹಾಲ್‌,  ಸಿಎಂಎಸ್‌ ಬಿಸಿನೆಸ್‌ ಸ್ಕೂಲ್‌, ಜೈನ್‌ ವಿಶ್ವವಿದ್ಯಾಲಯ, ನಂ 17, ಶೇಷಾದ್ರಿ ರಸ್ತೆ, ಗಾಂಧಿ ನಗರ. ಹಾಲಿಡೇ ಇನ್‌ ಎಕ್ಸ್‌ಪ್ರೆಸ್‌ ಪಕ್ಕ. ಶನಿವಾರ, ಸಂಜೆ 5.45ಕ್ಕೆ.

***
ವಿಜ್ಞಾನ–ಅಧ್ಯಾತ್ಮ ಪ್ರವಚನ

ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಶನಿವಾರ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 10.50ಕ್ಕೆ ಸಂಸ್ಕಾರ ಭಾರತಿಯ ರಾಷ್ಟ್ರೀಯ ಉಪಾಧ್ಯಕ್ಷೆ, ವಿಧಾನ ಪರಿಷತ್‌ ಮಾಜಿ ಸದಸ್ಯೆ ಡಾ.ಎಸ್.ಆರ್. ಲೀಲಾ ಅವರು ಸಂಸ್ಕೃತ ವಿದ್ವಾಂಸ ರಂಗನಾಥ ಶರ್ಮಾ ಅವರ ಸಾಹಿತ್ಯ ಕುರಿತು ಉಪನ್ಯಾಸ ನೀಡುವರು. ಮಧ್ಯಾಹ್ನ 12ಕ್ಕೆ ಗಾಯಕಿ ಅಂಜಲಿ ಅಂಬಿಲ್ಕರ್ ಮರಾಠಿ ನಾಟ್ಯ ಸಂಗೀತ, ಸುಗಮ ಸಂಗೀತ ಮತ್ತು ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಡುವರು.

ಮಧ್ಯಾಹ್ನ 2.30ಕ್ಕೆ ನಿಮ್ಹಾನ್ಸ್‌ನ ನಿವೃತ್ತ ಪ್ರೊ. ಡಾ.ಸಿ.ಆರ್. ಚಂದ್ರಶೇಖರ್ ಅವರು ‘ಇಳಿವಯಸ್ಸಿನಲ್ಲಿ ಆರೋಗ್ಯದಿಂದಿರುವ ಬಗ್ಗೆ’ ಆರೋಗ್ಯ ಜಾಗೃತಿ ಕಾರ್ಯಕ್ರಮ ನಡೆಸಿಕೊಡುವರು. ಮಧ್ಯಾಹ್ನ 3.30ಕ್ಕೆ ಸಂಸ್ಕೃತ ಶೋಧ ಸಂಸ್ಥಾನದ ಅಧ್ಯಕ್ಷ ಡಾ.ಜಿ.ಎನ್. ಭಟ್ ಹರಿಗಾರ ಅವರಿಂದ ‘ವಿಜ್ಞಾನ ಮತ್ತು ಅಧ್ಯಾತ್ಮ’ ಕುರಿತು ಪ್ರವಚನ ನಡೆಯಲಿದೆ. ಸ್ಥಳ: ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಭವನ, ಆನಂದರಾವ್ ವೃತ್ತದ ಬಳಿ, ಮೆಜೆಸ್ಟಿಕ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !