ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಕ್ಸ್‌ ಶೃಂಗಸಭೆ: ಬ್ರೆಜಿಲ್‌ಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

ಭಯೋತ್ಪಾದನೆ ವಿರುದ್ಧ ಹೋರಾಟ: ಸಹಕಾರ ವೃದ್ಧಿಗೆ ಒತ್ತು
Last Updated 12 ನವೆಂಬರ್ 2019, 20:42 IST
ಅಕ್ಷರ ಗಾತ್ರ

ನವದೆಹಲಿ: ‘ಭಯೋತ್ಪಾದನೆ ನಿರ್ಮೂಲನೆ ಮಾಡುವ ಸಂಬಂಧ, ಆರ್ಥಿಕವಾಗಿ ಸದೃಢ ಇರುವ ಜಗತ್ತಿನ ಐದು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟೂ ಗಟ್ಟಿಗೊಳಿಸಲು ಬ್ರಿಕ್ಸ್‌ ಶೃಂಗಸಭೆ ಒತ್ತು ನೀಡಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇದೇ 13 ಹಾಗೂ 14ರಂದು ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಬ್ರೆಜಿಲ್‌ಗೆ ತೆರಳುವ ಮುನ್ನ ಮಂಗಳವಾರ ಅವರು ಈ ವಿಷಯ ತಿಳಿಸಿದರು.

‘ಭಯೋತ್ಪಾದನೆ ಮಾತ್ರವಲ್ಲ, ಡಿಜಿಟಲ್‌ ಆರ್ಥಿಕತೆ, ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಪ್ರಮುಖ ವಿಷಯಗಳ ಮೇಲೂ ಶೃಂಗಸಭೆ ಬೆಳಕು ಚೆಲ್ಲಲಿದೆ. ಬ್ರೆಜಿಲ್‌ ಜತೆ ದ್ವಿಪಕ್ಷೀಯ ಸಂಬಂಧ, ವ್ಯೂಹಾತ್ಮಕ ಪಾಲುದಾರಿಕೆ ಕುರಿತು ಅಧ್ಯಕ್ಷ ಜೈರ್‌ ಬೊಲ್ಸೊನಾರೊ ಅವರೊಂದಿಗೆ ಚರ್ಚೆ ನಡೆಸುವೆ’ ಎಂದೂ ಅವರು ಹೇಳಿದರು.

‘ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಮುಖಂಡರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಲು ಶೃಂಗಸಭೆ ನನಗೆ ಅವಕಾಶ ಕಲ್ಪಿಸಲಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT