ಶನಿವಾರ, ಫೆಬ್ರವರಿ 27, 2021
31 °C

ಕೋಲ್ಕತ್ತ ಸೇತುವೆ ಕುಸಿತ: ರಾಜಕೀಯ ಕೆಸರೆರಚಾಟ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಕೋಲ್ಕತ್ತ: ಇಲ್ಲಿನ ಅಲಿಪೊರಾ ಪ್ರದೇಶದ ಮಾಝರ್‌ಹಾಟ್ ಸೇತುವೆ ಕುಸಿದು ವ್ಯಕ್ತಿಯೊಬ್ಬರು ಬಲಿಯಾಗಿ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡ ಪ್ರಕರಣ ಇದೀಗ ರಾಜಕೀಯ ಕೆಸರೆರಚಾಟಕ್ಕೆ ತಿರುಗಿದೆ. 

ಪಶ್ಚಿಮ ಬಂಗಾಳದ ಟಿಎಂಸಿ ನೇತೃತ್ವದ ಸರ್ಕಾರ ಸೇತುವೆಗಳ ದುರಸ್ತಿ ಮತ್ತು ನಿರ್ವಹಣೆಯನ್ನು ಕಡೆಗಣಿಸಿದ್ದು, ಕೇವಲ ವಿವಿಧ ಪ್ರತಿಮೆಗಳಿಗೆ ನೀಲಿ, ಬಿಳಿ ಬಣ್ಣ ಬಳಿಸುವುದರಲ್ಲಿ ನಿರತವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಇದನ್ನು ಅಲ್ಲಗಳೆದಿರುವ ರಾಜ್ಯ ಸರ್ಕಾರ, ಎಡಪಕ್ಷಗಳ ಆಡಳಿತಾವಧಿಯಲ್ಲಿ ದುಃಸ್ಥಿತಿ ತಲುಪಿದ್ದ ಹಳೆಯ ಹಾಗೂ ಹೊಸ ಸೇತುವೆಗಳ ದುರಸ್ತಿಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಕ್ರಿಯಿಸಿದೆ.

ಎಚ್ಚರಿಸಿದ್ದರೂ ವಿಳಂಬ: ಮಾಝರ್‌ಹಾಟ್ ಸೇರಿದಂತೆ ನಗರದ ವಿವಿಧ ಸೇತುವೆಗಳ ದುಃಸ್ಥಿತಿ ಕುರಿತು 2016ರಲ್ಲೇ ‍ರಾಜ್ಯ ಸರ್ಕಾರವನ್ನು ಎಚ್ಚರಿಸಲಾಗಿತ್ತು ಎಂದು ಎಂಜಿನಿಯರಿಂಗ್ ಮತ್ತು ಕನ್ಸಲ್ಟೆನ್ಸಿ ಸಂಸ್ಥೆ ರೈಟ್ಸ್‌ ತಿಳಿಸಿದೆ.

ರಾಜ್ಯ ಸರ್ಕಾರ ಮಾಝರ್‌ಹಾಟ್ ಸೇತುವೆ ದುರಸ್ತಿಗೆ ಮುಂದಾಗಿತ್ತು, ಆದರೆ ಆಡಳಿತಾತ್ಮಕ ಬಿಕ್ಕಟ್ಟುಗಳಿಂದಾಗಿ ಇದು ವಿಳಂಬವಾಯಿತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು