ಗುರುವಾರ , ನವೆಂಬರ್ 21, 2019
21 °C

ಬಿಎಸ್‌ಎಫ್‌ ಯೋಧ ಸಾವು: ಬಿಜಿಬಿ ವಿರುದ್ಧ ಎಫ್‌ಐರ್‌

Published:
Updated:

ಕೋಲ್ಕತ್ತ: ಪಶ್ಚಿಮ ಬಂಗಾಳದ ಗಡಿಯಲ್ಲಿ ಬಿಎಸ್‌ಎಫ್‌ ಯೋಧರೊಬ್ಬರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಗಡಿ ಭದ್ರತಾ ಪಡೆ (ಬಿಜಿಬಿ) ವಿರುದ್ಧ ಎಫ್‌ಐಆರ್ ದಾಖಲಾಗಿದೆ. 

ಮುರ್ಷಿರಾಬಾದ್‌ ಜಿಲ್ಲೆಯ ಬಿಎಸ್‌ಎಫ್‌ ಪಡೆಯ ಉಪಠಾಣೆಯ ಬಳಿ ಉಭಯ ದೇಶಗಳ ಭದ್ರತಾ ಪಡೆಗಳ ನಡುವೆ ನಡೆಯುತ್ತಿದ್ದ ಧ್ವಜ ಸಭೆ ಸಂದರ್ಭದಲ್ಲಿ ಈ ಅವಘಡ ನಡೆದಿತ್ತು. ಘಟನೆಯಲ್ಲಿ ಹೆಡ್‌ಕಾನ್‌ಸ್ಟೆಬಲ್‌ ವಿಜಯ್‌ ಭನ್‌ ಸಿಂಗ್‌ (51) ಮೃತಪಟ್ಟಿದ್ದರು. ಇನ್ನೊಬ್ಬ ಯೋಧ ರಾಜ್‌ವೀರ್‌ ಯಾದವ್‌ ಗಾಯಗೊಂಡಿದ್ದರು. 

 

 

ಪ್ರತಿಕ್ರಿಯಿಸಿ (+)