ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲಕ್ಕೊಳಗಾಗಿ ಬಿಎಸ್‍ಪಿ ಬದಲು ಬಿಜೆಪಿಗೆ ಮತ ನೀಡಿದ ಯುವಕ ಬೆರಳು ಕತ್ತರಿಸಿದ!

Last Updated 19 ಏಪ್ರಿಲ್ 2019, 12:23 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದ ಬುಲಂದ್ ಶಹರ್ ಲೋಕಸಭಾ ಕ್ಷೇತ್ರದ ಶಿಕಾರ್‌ಪುರ್ ಪ್ರದೇಶದಲ್ಲಿ ದಲಿತ ಯುವಕನೊಬ್ಬ ಮತಯಂತ್ರದಲ್ಲಿ ಬಟನ್ ಒತ್ತಿ ತಾನು ಮತ ಚಲಾವಣೆ ಮಾಡಿದ್ದು ಬಿಎಸ್‍ಪಿಗೆ ಅಲ್ಲ, ಬಿಜೆಪಿಗೆ ಎಂದು ಅರಿತ ಕೂಡಲೇ ಸಿಟ್ಟಿನಿಂದ ಕೈ ಬೆರಳು ಕತ್ತರಿಸಿದ ಘಟನೆ ನಡೆದಿದೆ.
ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಇಲ್ಲಿನ ಅಬ್ದುಲ್ಲಾಪುರ್ ಹುಲಾಸನ್ ಗ್ರಾಮದ ನಿವಾಸಿ ಪವನ್ ಕುಮಾರ್ ಎಂಬ ದಲಿತ ಯುವಕ ಮತದಾನ ಮಾಡಿದ್ದನು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಎಸ್‌ಪಿ-ಬಿಎಸ್‌ಪಿ- ಆರ್‌ಎಲ್‌ಡಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಯೋಗೇಶ್ ವರ್ಮಾ ಅವರಿಗೆ ಮತ ನೀಡಲು ಪವನ್ ಕುಮಾರ್ ತೀರ್ಮಾನಿಸಿದ್ದರು.ಆದರೆ ಗೊಂದಲಕ್ಕೊಳಗಾಗಿ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ ಭೋಲಾ ಸಿಂಗ್ ಪರ ಮತ ಚಲಾಯಿಸಿದ್ದನು.ತಾನು ಬೇರೆ ಪಕ್ಷದ ಅಭ್ಯರ್ಥಿ ಪರ ಮತ ಚಲಾಯಿಸಿದ್ದೇನೆ ಎಂದು ಅರಿವಾದ ಕೂಡಲೇ ಸಿಟ್ಟಿನಿಂದ ಈತ ಬೆರಳು ಕತ್ತರಿಸಿದ್ದಾನೆ.

ಸಿಟ್ಟು ಇಳಿದ ನಂತರ ವಿಡಿಯೊವೊಂದನ್ನು ಪೋಸ್ಟ್ ಮಾಡಿರುವ ಈತ ತಾನು ಬೆರಳು ಕತ್ತರಿಸಿ ತಪ್ಪು ಮಾಡಿಕೊಂಡೆ ಎಂದುಪರಿತಪಿಸಿದ್ದಾನೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT