ವಾರ್ಷಿಕ ಆದಾಯ ₹10 ಲಕ್ಷ ಇದ್ದರೂ ತೆರಿಗೆ ವಿನಾಯಿತಿ ಪಡೆಯಬಹುದು, ಹೇಗೆ ಗೊತ್ತೇ?

7
ಕೇಂದ್ರ ಬಜೆಟ್ 2019

ವಾರ್ಷಿಕ ಆದಾಯ ₹10 ಲಕ್ಷ ಇದ್ದರೂ ತೆರಿಗೆ ವಿನಾಯಿತಿ ಪಡೆಯಬಹುದು, ಹೇಗೆ ಗೊತ್ತೇ?

Published:
Updated:

ಬೆಂಗಳೂರು: ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ₹5 ಲಕ್ಷದವರೆಗೆ ವಿಸ್ತರಣೆ ಮಾಡಲಾಗಿದೆ. ಆದರೂ ನೀವು ₹10 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿದ್ದರೂ ತೆರಿಗೆ ವಿನಾಯಿತಿ ಪಡೆಯಲು ಸಾಧ್ಯವಿದೆ! ಹೇಗೆ ಗೊತ್ತೇ?

ಈ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿ ಜೊತೆಗೆ ಸೆಕ್ಷನ್ 87ಎ ಅನ್ವಯ ಆದಾಯ ತೆರಿಗೆಗೆ ನೀಡಲಾಗುವ ಕಡಿತವನ್ನೂ (ರಿಬೇಟ್) ₹2,500ರಿಂದ ₹12,500ಕ್ಕೆ ವಿಸ್ತರಿಸಲಾಗಿದೆ. ಸ್ಟ್ಯಾಂಡರ್ಡ್‌ ಡಿಡಕ್ಷನ್ ಮಿತಿಯನ್ನೂ ₹40,000ದಿಂದ ₹50,000ಕ್ಕೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: ಮಧ್ಯಮ ವರ್ಗ, ರೈತ, ಕಾರ್ಮಿಕರಿಗೆ ಬಜೆಟ್‌ನಲ್ಲಿ ಏನೇನಿದೆ? ಇಲ್ಲಿದೆ ಮಾಹಿತಿ​

ತೆರಿಗೆಯ ಸ್ತರದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ₹5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವವರು ಈ ಹಿಂದಿನ ಸ್ತರದಲ್ಲೇ ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ₹5 ಲಕ್ಷಕ್ಕಿಂತ ಹೆಚ್ಚಿನ ಆದಾಯಕ್ಕೆ ಸ್ಟ್ಯಾಂಡರ್ಡ್‌ ಡಿಡಕ್ಷನ್, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ, ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ (ಎನ್‌ಪಿಎಸ್‌) ಹೂಡಿಕೆ, ಗೃಹ ಸಾಲದ ಬಡ್ಡಿ, ಆರೋಗ್ಯ ವಿಮೆ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ಇದನ್ನೂ ಓದಿ: ನಿಮ್ಮ ಆದಾಯಕ್ಕೂ ಇದೆಯೇ ತೆರಿಗೆ ವಿನಾಯಿತಿ? ಬಜೆಟ್‌ ಬಳಿಕ ಆಗಿದ್ದೇನು?​

ಉದಾಹರಣೆಗೆ: ₹10 ಲಕ್ಷ ವಾರ್ಷಿಕ ಆದಾಯವಿದೆ ಎಂದಿಟ್ಟುಕೊಳ್ಳೋಣ. ಇದರಲ್ಲಿ ₹50,000ವರೆಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್ ಪಡೆಯಬಹುದು. ಸೆಕ್ಷನ್ 80ಸಿ ಅನ್ವಯ ₹1.5 ಲಕ್ಷಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು. ₹2 ಲಕ್ಷದವರೆಗೆ ಗೃಹ ಸಾಲದ ಬಡ್ಡಿ ಮೇಲೆ ವಿನಾಯಿತಿ, ಎನ್‌ಪಿಎಸ್‌ನಲ್ಲಿ ಹೂಡಿಕೆ ಮಾಡಿದ್ದಕ್ಕೆ ₹50,000ದವರೆಗೆ ತೆರಿಗೆ ವಿನಾಯಿತಿ ದೊರೆಯಲಿದೆ. ಆರೋಗ್ಯ ವಿಮೆಗೂ ₹50,000ದವರೆಗೆ ತೆರಿಗೆ ವಿನಾಯಿತಿ ಪಡೆಯಲೂ ಅವಕಾಶವಿದೆ. ಇಲ್ಲಿಗೆ ₹5 ಲಕ್ಷ ಆಯಿತು.

ಇನ್ನುಳಿದ ₹5 ಲಕ್ಷಕ್ಕೆ ₹12,500 ತೆರಿಗೆ ಕಟ್ಟಬೇಕಾಗುತ್ತದೆ. ಆದರೆ, ಸದ್ಯ ಸೆಕ್ಷನ್ 87ಎ ಅನ್ವಯ ಆದಾಯ ತೆರಿಗೆಗೆ ನೀಡಲಾಗುವ ಕಡಿತವನ್ನು (ರಿಬೇಟ್) ₹2,500ರಿಂದ ₹12,500ಕ್ಕೆ ವಿಸ್ತರಿಸಿರುವುದರಿಂದ ಈ ತೆರಿಗೆಗೂ ವಿನಾಯಿತಿ ದೊರೆಯಲಿದೆ. ಇಲ್ಲಿಗೆ ₹10 ಲಕ್ಷ ವಾರ್ಷಿಕ ಆದಾಯವಿದ್ದರೂ ತೆರಿಗೆಯಿಂದ ವಿನಾಯಿತಿ ಪಡೆಯಲು ಸಾಧ್ಯವಿದೆ ಎಂದು ಫಿನ್‌ಸೇಫ್‌ ಸಂಸ್ಥಾಪಕ ಮ್ರಿನ್ ಅಗರ್‌ವಾಲ್ ಲೆಕ್ಕಾಚಾರವನ್ನು ಉಲ್ಲೇಖಿಸಿ ಮನಿಕಂಟ್ರೋಲ್ ಸುದ್ದಿತಾಣ ವರದಿ ಮಾಡಿದೆ.

ವಾರ್ಷಿಕ ವೇತನ ₹10 ಲಕ್ಷ
ಸೆಕ್ಷನ್ 80ಸಿ ವಿನಾಯಿತಿ ₹1.5 ಲಕ್ಷ
ಸ್ಟ್ಯಾಂಡರ್ಡ್‌ ಡಿಡಕ್ಷನ್ ₹50 ಸಾವಿರ
ಗೃಹ ಸಾಲದ ಬಡ್ಡಿ ಮೇಲಿನ ವಿನಾಯಿತಿ ₹2 ಲಕ್ಷ
ಎನ್‌ಪಿಎಸ್‌ ಹೂಡಿಕೆ ವಿನಾಯಿತಿ ₹50 ಸಾವಿರ
ಆರೋಗ್ಯ ವಿಮೆ ವಿನಾಯಿತಿ ₹50 ಸಾವಿರ
ತೆರಿಗೆ ಪಾವತಿಸಬೇಕಾದ ಮೊತ್ತ ₹5 ಲಕ್ಷ
ಪಾವತಿಸಬೇಕಾದ ತೆರಿಗೆ ₹12,500
87ಎ ಅನ್ವಯ ದೊರೆಯುವ ವಿನಾಯಿತಿ ₹12,500
ತೆರಿಗೆ ₹0

ಬಜೆಟ್ ಸಂಬಂಧಿತ ಇನ್ನಷ್ಟು ಸುದ್ದಿಗಳು...

‘ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ’ ಸ್ಥಾ‍ಪನೆ, ರೈತರ ಖಾತೆಗೆ ₹6 ಸಾವಿರ

ವೇತನದಾರರಿಗೆ ಬಜೆಟ್‌ ಬೋನಸ್: ₹ 5 ಲಕ್ಷ ವರೆಗೆ ತೆರಿಗೆ ವಿನಾಯ್ತಿ​

ಕೇಂದ್ರ ಬಜೆಟ್‌ 2019: ರಕ್ಷಣಾ ವೆಚ್ಚ ₹3 ಲಕ್ಷ ಕೋಟಿಗೆ ಏರಿಕೆ​

ರೈಲ್ವೆಗೆ ₹1.6 ಲಕ್ಷ ಕೋಟಿ: ಕಾವಲುರಹಿತ ಕ್ರಾಸಿಂಗ್‌ಗಳು ಬಂದ್‌​

ಹೆಚ್ಚಿದೆ ಆದಾಯ, ಪ್ರಕಾಶಿಸುತ್ತಿದೆ ಭಾರತ: ಪೀಯೂಷ್ ಗೋಯಲ್

ಅಸಂಘಟಿತ ವಲಯದ ಕಾರ್ಮಿಕರಿಗಾಗಿ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್’​

ಆಯುಷ್ಮಾನ್ ಭಾರತ್‌‘ ಯೋಜನೆಯಡಿ 10 ಲಕ್ಷ ಜನರಿಗೆ ಚಿಕಿತ್ಸೆ

ನಾನು ರೂಪಿಸಿದ್ದ ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ: ಸಿದ್ದರಾಮಯ್ಯ ಆರೋಪ​

ಕೃತಕ ಬುದ್ಧಿಮತ್ತೆ ಕೇಂದ್ರ ಸ್ಥಾಪನೆ, ಲಕ್ಷ ಡಿಜಿಟಲ್‌ ಗ್ರಾಮ ನಿರ್ಮಾಣಕ್ಕೆ ಒತ್ತು

ಕೇಂದ್ರ ಬಜೆಟ್‌ 2019: ಇವರು ಹೀಗಂದರು...​

ಬರಹ ಇಷ್ಟವಾಯಿತೆ?

 • 17

  Happy
 • 3

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !