ಬುಧವಾರ, ಫೆಬ್ರವರಿ 24, 2021
24 °C

ಕೆಂಪು ವಸ್ತ್ರದಲ್ಲಿ ಬಜೆಟ್ ತಂದ ನಿರ್ಮಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಬಜೆಟ್ ದಾಖಲೆಗಳನ್ನು ಕೆಂಪು ವಸ್ತ್ರದಲ್ಲಿ ತರುವ ಮೂಲಕ ಹಲವು ವರ್ಷಗಳ ಶಿಷ್ಟಾಚಾರ ಮುರಿದರು.

ಈವರೆಗೆ ಬಜೆಟ್ ಮಂಡಿಸಿದ ಹಣಕಾಸು ಸಚಿವರು ಚರ್ಮದ ಸೂಟ್ ಕೇಸ್ ನಲ್ಲಿ ಬಜೆಟ್ ದಾಖಲೆಗಳನ್ನು ಸಂಸತ್ತಿಗೆ ತರುತ್ತಿದ್ದರು.

'ವಸಾಹತು ಮನಃಸ್ಥಿತಿಯಿಂದ ನಾವು ಮುಕ್ತರಾಗಿರುವುದನ್ನು ಈ ಬದಲಾವಣೆಯು ಸಂಕೇತಿಸುತ್ತದೆ' ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ಸುಬ್ರಹ್ಮಣ್ಯಂ ಹೇಳಿದ್ದಾರೆ.

ಬಜೆಟ್ ಮಂಡಿಸುವ ದಿನ ಚರ್ಮದ ಸೂಟ್ ಕೇಸ್ ನಲ್ಲಿ ಸಂಸತ್ತಿಗೆ ದಾಖಲೆಗಳನ್ನು ತರುವ ಶಿಷ್ಟಾಚಾರವನ್ನು ಮೊದಲ ಹಣಕಾಸು ಸಚಿವ ಷಣ್ಮುಗಂ ಚೆಟ್ಟಿ ಆರಂಭಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು