ಶುಕ್ರವಾರ, ಫೆಬ್ರವರಿ 28, 2020
19 °C

ಗರ್ಭಪಾತದ ಅವಧಿ 24 ವಾರಗಳವರೆಗೆ ವಿಸ್ತರಣೆ: ಸಚಿವ ಸಂಪುಟ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ಗರ್ಭಪಾತದ ಅವಧಿ ಹೆಚ್ಚಳಕ್ಕೆ ಒಪ್ಪಿಗೆ ನೀಡಿರುವ ಕೇಂದ್ರ ಸಚಿವ ಸಂಪುಟವು, ಈಗಿದ್ದ 20 ವಾರಗಳಿಗೆ ಬದಲಾಗಿ 24 ವಾರಗಳ ಗರ್ಭಪಾತಕ್ಕೆ ಅಸ್ತು ಎಂದಿದೆ. 

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಗರ್ಭಪಾತದ ಅವಧಿಯನ್ನು 20 ವಾರಗಳಿಂದ 24 ವಾರಗಳಿಗೆ ವಿಸ್ತರಿಸಲಾಗಿದೆ. ಇದು ಸುರಕ್ಷಿತ ಗರ್ಭಪಾತವನ್ನು ಖಚಿತಪಡಿಸುತ್ತದೆ ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಹಕ್ಕನ್ನು ಮತ್ತಷ್ಟು ಬಲಪಡಿಸುತ್ತದೆ. ಈ ನಿಟ್ಟಿನಲ್ಲಿ ಗರ್ಭಪಾತ ಕಾನೂನಿನಲ್ಲಿ ಮಹತ್ವದ ಬದಲಾವಣೆ ತರಲಾಗಿದೆ ಎಂದು ಹೇಳಿದರು.

ಗರ್ಭಪಾತದ ಅವಧಿಯನ್ನು 24 ವಾರಗಳಿಗೆ ವಿಸ್ತರಣೆ ಮಾಡಿರುವುದರಿಂದಾಗಿ ಅತ್ಯಾಚಾರ ಸಂತ್ರಸ್ತೆಯರಿಗೆ, ಅಂಗವಿಕಲ ಯುವತಿಯರು ಮತ್ತು ತಾವು ಗರ್ಭ ಧರಿಸಿರುವುದು ತಿಳಿಯದೇ ಇರುವ ಅಪ್ರಾಪ್ತರಿಗೆ ನೆರವಾಗಲಿದೆ ಎಂದರು.  

ಇದು ಪ್ರಗತಿಪರ ಸುಧಾರಣೆ ಮತ್ತು ಮಹಿಳೆಯರಿಗೆ ಸಂತಾನೋತ್ಪತ್ತಿ ಹಕ್ಕುಗಳನ್ನು ನೀಡುವ ಮೂಲಕ ಗರ್ಭಧಾರಣೆಯ 20 ವಾರಗಳ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲಾಗಿದೆ. ಇದು ಅತ್ಯಂತ ಮುಖ್ಯ ಏಕೆಂದರೆ ಮೊದಲ ಐದು ತಿಂಗಳಲ್ಲಿ ಯುವತಿಗೆ ತಾನು ಗರ್ಭ ಧರಿಸಿರುವುದೇ ತಿಳಿದಿರುವುದಿಲ್ಲ ಮತ್ತು ಬಳಿಕ ನ್ಯಾಯಾಲಯಕ್ಕೆ ತೆರಳುತ್ತಾರೆ. ಈ ಕುರಿತಂತೆ ಹಲವರೊಂದಿಗೆ ಚರ್ಚಿಸಲಾಗಿದೆ. ಇದು ತಾಯಿಯ ಮರಣ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಎಂದು ಸಚಿವರು ತಿಳಿಸಿದರು. 

ಮೆಡಿಕಲ್ ಟರ್ಮಿನೇಷನ್ ಆಫ್ ಪ್ರಗ್ನೆನ್ಸಿ ಕಾಯ್ದೆ 1971ಕ್ಕೆ ತಿದ್ದುಪಡಿ ಮಾಡಲಾಗಿದ್ದು, ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು