ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಒಕೆಯಿಂದ ಭಾರತಕ್ಕೆ ಬಂದ ಕುಟುಂಬಗಳ ಪುನರ್‌ ವಸತಿಗೆ ₹ 5.5 ಲಕ್ಷ ಪ್ಯಾಕೇಜ್

5,300 ಕುಟುಂಬಗಳಿಗೆ ನೆರವು
Last Updated 9 ಅಕ್ಟೋಬರ್ 2019, 12:23 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಭಾರತಕ್ಕೆ ಸ್ಥಳಾಂತರಗೊಂಡ ಕುಟುಂಬಗಳಿಗೆ ತಲಾ ₹ 5.5 ಲಕ್ಷ ಪುನರ್‌ವಸತಿ ಪ್ಯಾಕೇಜ್‌ ಅನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ.

ಪಿಒಕೆಯಿಂದ ಬಂದು, ಜಮ್ಮು ಮತ್ತು ಕಾಶ್ಮೀರದ ಹೊರಗೆ ನೆಲೆಸಿದ್ದ ಸುಮಾರು 5,300 ಕುಟುಂಬಗಳು ಬಳಿಕ ಜಮ್ಮು– ಕಾಶ್ಮೀರಕ್ಕೆ ಸ್ಥಳಾಂತರಗೊಂಡಿದ್ದವು. ಪುನರ್‌ವಸತಿ ಪ್ಯಾಕೇಜ್‌ನಿಂದ ಇಲ್ಲಿಯವರೆಗೆ ಹೊರಗಿದ್ದ ಈ ಕುಟುಂಬಗಳಿಗೀಗ ಪ್ಯಾಕೇಜ್‌ ಮೂಲಕ ನೆರವು ದೊರೆಯಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದರು.

‘ಐತಿಹಾಸಿಕ ತಪ್ಪನ್ನು’ ನಮ್ಮ ಸರ್ಕಾರ ಸರಿ ಮಾಡಿದೆ ಎಂದು ಸಚಿವರು ಸಂಪುಟ ಸಭೆಯ ಬಳಿಕ ಹೇಳಿದರು. 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಕುರಿತು ಘೋಷಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT