ಕುಂಭಮೇಳದಲ್ಲಿ ಸಂಪುಟ ಸಭೆ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಮುಖ್ಯಮಂತ್ರಿ-ಸಚಿವರು

ಭಾನುವಾರ, ಜೂಲೈ 21, 2019
25 °C

ಕುಂಭಮೇಳದಲ್ಲಿ ಸಂಪುಟ ಸಭೆ: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ಮುಖ್ಯಮಂತ್ರಿ-ಸಚಿವರು

Published:
Updated:
Prajavani

ಅಲಹಾಬಾದ್‌: ಉತ್ತರ ಪ್ರದೇಶ ಸಚಿವ ಸಂಪುಟ ಸಭೆ ಇದೇ ಮೊದಲ ಬಾರಿಗೆ ಮಂಗಳವಾರ ಕುಂಭಮೇಳದಲ್ಲಿ ನಡೆಯಿತು. ಲಖನೌದಿಂದ ಆಗಮಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸಂಪುಟ ಸಹೋದ್ಯೋಗಿಗಳು ಸಾಧು–ಸಂತರ ಜತೆ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು.

ಅಲ್ಲಿಂದ ನೇರ ಹನುಮಾನ ಮಂದಿರ, ಸರಸ್ವತಿ ಕೂಪ, ಮಂದಿರಗಳಿಗೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಕುಂಭಮೇಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಾದ ಟೆಂಟ್‌ನಲ್ಲಿರುವ ಸಮಗ್ರ ನಿಯಂತ್ರಣ ಮತ್ತು ಮುಖ್ಯ ಕೇಂದ್ರದಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನೇಕ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !