ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೇನು ಚುನಾವಣಾ ಪ್ರಚಾರವೋ ಅಥವಾ ಕುದುರೆ ವ್ಯಾಪಾರವೋ?: ಮೋದಿಗೆ ಡೆರಿಕ್ ಪ್ರಶ್ನೆ

Last Updated 29 ಏಪ್ರಿಲ್ 2019, 13:41 IST
ಅಕ್ಷರ ಗಾತ್ರ

ಕೊಲ್ಕತ್ತಾ: ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರತೃಣಮೂಲ ಕಾಂಗ್ರೆಸ್‍ನ ಶಾಸಕರು ಬಿಜೆಪಿ ಸೇರುತ್ತಾರೆ. ಈಗಾಗಲೇ ಟಿಎಂಸಿಯ 40 ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ ಎಂಬ ಮೋದಿ ಹೇಳಿಕೆ ವಿರುದ್ಧ ಟಿಎಂಸಿ ಗರಂ ಆಗಿದೆ.

ನರೇಂದ್ರ ಮೋದಿಯವರ ಹೇಳಿಕೆ ಬಗ್ಗೆ ಪತ್ರಿಕ್ರಿಯಿಸಿದ ಟಿಎಂಸಿ ನೇತಾರ ಡೆರಿಕ್ ಒ ಬ್ರೇನ್, ತಮ್ಮ ಪಕ್ಷದಿಂದ ಯಾವುದೇ ಶಾಸಕರು ಬಿಜೆಪಿಗೆ ಸೇರಲ್ಲ ಎಂದಿದ್ದಾರೆ.

ಎಕ್ಸ್‌ಪೈರಿ ಬಾಬು ಪಿಎಂ, ನಿಮ್ಮೊಂದಿಗೆ ಯಾರೂ ಬರಲ್ಲ. ಒಬ್ಬನೇ ಒಬ್ಬ ಶಾಸಕ ಕೂಡಾ ಬರಲ್ಲ. ಇದೇನು ಚುನಾವಣಾ ಪ್ರಚಾರವೋ ಅಥವಾ ಕುದುರೆ ವ್ಯಾಪಾರವೋ?. ನಿಮ್ಮ ಎಕ್ಸ್‌ಪೈರಿ ದಿನಾಂಕ ಮುಗಿಯುತ್ತಾ ಬಂದಿದೆ.ನೀವು ಕುದುರೆ ವ್ಯಾಪಾರ ಮಾಡುತ್ತಿದ್ದೀರಿ ಎಂದು ನಾವು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ ಎಂದಿದ್ದಾರೆ.

ಪಶ್ಚಿಮ ಬಂಗಾಳದ ಸೆರಾಂಪೋರ್‌ನಲ್ಲಿ ಸೋಮವಾರ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮೋದಿ, 'ದೀದಿ, ಮೇ23ಕ್ಕೆ ಫಲಿತಾಂಶ ಪ್ರಕಟವಾದ ನಂತರ ಎಲ್ಲೆಡೆ ಕಮಲ ಅರಳುತ್ತದೆ.ನಿಮ್ಮ ಶಾಸಕರೇ ನಿಮ್ಮನ್ನು ತೊರೆದು ಹೋಗುತ್ತಾರೆ.ಈಗಲೂ ನಿಮ್ಮ 40 ಶಾಸಕರು ನನ್ನೊಂದಿಗೆ ಸಂಪರ್ಕದಲ್ಲಿದ್ದಾರೆ'ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT