ಭಾನುವಾರ, ಸೆಪ್ಟೆಂಬರ್ 26, 2021
27 °C
ಇಂಗಾಲದ ಡೈ ಆಕ್ಸೈಡ್‌ ಹೆಚ್ಚಳದಿಂದ ‌ಆಹಾರೋತ್ಪನ್ನಗಳ ಮೇಲೆ ಪರಿಣಾಮ

ಇಂಗಾಲ ಪರಿಣಾಮ: ಭಾರತೀಯರಿಗೆ ಭವಿಷ್ಯದಲ್ಲಿ ಪೌಷ್ಟಿಕಾಂಶದ ತೀವ್ರ ಕೊರತೆ?

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಬಾಸ್ಟನ್‌: ಇಂಗಾಲದ ಡೈ ಆಕ್ಸೈಡ್ ಪ್ರಮಾಣ ಹೆಚ್ಚಳದಿಂದ 2050ರ ಹೊತ್ತಿಗೆ ಕೋಟ್ಯಂತರ ಭಾರತೀಯರಲ್ಲಿ ಪೌಷ್ಟಿಕಾಂಶದ ಕೊರತೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಯನವೊಂದು ತಿಳಿಸಿದೆ. ಇಂಗಾಲದ ಅಂಶ ಏರಿಕೆಯಿಂದ, ಪ್ರಧಾನ ಬೆಳೆಗಳಾದ ಅಕ್ಕಿ ಮತ್ತು ಗೋಧಿ ಕಡಿಮೆ ಪೌಷ್ಟಿಕಾಂಶ ಹೊಂದುವುದೇ ಇದಕ್ಕೆ ಕಾರಣ.

ಮಾನವ ಚಟುವಟಿಕೆಯಿಂದ ಇಂಗಾಲದ ಡೈ ಆಕ್ಸೈಡ್‌ ಮಟ್ಟ ಏರಿಕೆಯಾಗುತ್ತದೆ. ಇದರಿಂದ ವಿಶ್ವದಾದ್ಯಂತ 17.5 ಕೋಟಿ ಜನ ಸತುವಿನ ಅಂಶದ ಕೊರತೆ ಮತ್ತು 12.2 ಕೋಟಿ ಜನ ಪೌಷ್ಟಿಕಾಂಶದ ಕೊರತೆ ಎದುರಿಸಲಿದ್ದಾರೆ ಎಂದು ಅಮೆರಿಕದ ಹಾರ್ವರ್ಡ್‌ ಟಿಎಚ್‌ ಚಾನ್‌ ಸ್ಕೂಲ್‌ನ ಸಾರ್ವಜನಿಕ ಆರೋಗ್ಯ ವಿಭಾಗ ನಡೆಸಿದ ಅಧ್ಯಯನವೊಂದು ತಿಳಿಸಿದೆ.

ಇಂಗಾಲದ ಅಂಶ ಏರಿಕೆಯಿಂದ ಕೋಟ್ಯಂತರ ಮಹಿಳೆಯರು ಮತ್ತು ಮಕ್ಕಳು ಕಬ್ಬಿಣದ ಅಂಶದಿಂದ ವಂಚಿತರಾಗುತ್ತಾರೆ.

ಇದರಿಂದಾಗಿ ಅವರಲ್ಲಿ ರಕ್ತಹೀನತೆ ಮತ್ತು ಇತರ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಈಗಾಗಲೇ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವವರ ಸ್ಥಿತಿಯು ಪೌಷ್ಟಿಕಾಂಶ ರಹಿತ ಬೆಳೆಗಳ ಕಾರಣದಿಂದ ಇನ್ನಷ್ಟು ಹದಗೆಡಲಿದೆ ಎಂದು ‘ನೇಚರ್‌ ಕ್ಲೈಮೇಟ್‌ ಚೇಂಜ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿ ವಿವರಿಸಿದೆ.

ಭಾರತದಲ್ಲಿ ಇಂಗಾಲದ ಏರಿಕೆಯಿಂದ ದೊಡ್ಡ ಹಾನಿಯಾಗಲಿದೆ. 5 ಕೋಟಿ ಮಂದಿ ಸತುವಿನ ಅಂಶದ ಕೊರತೆ ಎದುರಿಸಲಿದ್ದಾರೆ. 3.8 ಕೋಟಿ ಜನ ಪೌಷ್ಟಿಕಾಂಶ ಹಾಗೂ 50.2 ಕೋಟಿ ಮಹಿಳೆಯರು, ಮಕ್ಕಳು ಕಬ್ಬಿಣದ ಅಂಶದ ಕೊರತೆಯಿಂದ ಕಾಣಿಸಿಕೊಳ್ಳುವ ಕಾಯಿಲೆಗಳಿಗೆ ತುತ್ತಾಗಲಿದ್ದಾರೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯ ದೇಶಗಳೂ ಸಾಕಷ್ಟು ಪ್ರಮಾಣದಲ್ಲಿ ತೊಂದರೆಗೆ ಒಳಗಾಗಲಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು