ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ. 27 ರಂದು ಕಾರ್ಟೊಸ್ಯಾಟ್‌–3 ಉಡಾವಣೆ

Last Updated 22 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಭೂವೀಕ್ಷಣೆಯ ಕಾರ್ಟೊಸ್ಯಾಟ್‌–3 ಮತ್ತು 13 ವಾಣಿಜ್ಯ ಉದ್ದೇಶದ ನ್ಯಾನೊ ಉಪಗ್ರಹಗಳನ್ನು ಇಸ್ರೊ ಇದೇ 27 ರಂದು ಪಿಎಸ್‌ಎಲ್‌ವಿ– ಸಿ47 ರಾಕೆಟ್‌ ಮೂಲಕ ಉಡಾವಣೆ ಮಾಡಲಿದೆ.

ಈ ಹಿಂದೆ ನ. 25 ಕ್ಕೆ ಉಡಾವಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಕಾರಣಾಂತರಗಳಿಂದ ಉಡಾವಣೆಯನ್ನು ನ.27 ಕ್ಕೆ ನಿಗದಿ ಮಾಡಲಾಗಿದೆ. ಅಂದು ಬೆಳಿಗ್ಗೆ 9.28ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾಗುವುದು ಎಂದು ಇಸ್ರೊ ಮೂಲಗಳು ತಿಳಿಸಿವೆ.

ಕಾರ್ಟೊಸ್ಯಾಟ್‌–3 ಮೂರನೇ ತಲೆಮಾರಿನ, ಚುರುಕುಗತಿಯಿಂದ ಕಾರ್ಯ ನಿರ್ವಹಿಸುವ ಮತ್ತು ಅತ್ಯಧಿಕ ರೆಸಲ್ಯೂಶನ್‌ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಭೂಮಿಯಿಂದ 509 ಕಿ.ಮೀ ಎತ್ತರದಲ್ಲಿ 97.5 ಡಿಗ್ರಿ ಕೋನದಲ್ಲಿ ಉಪಗ್ರಹಗಳು ನೆಲೆಗೊಳ್ಳಲಿವೆ.

‘ಎಕ್ಸ್‌ಎಲ್‌’ ಸಂರಚನೆಯ ಪಿಎಸ್‌ಎಲ್‌ವಿ–ಸಿ 47 21 ನೇ ಹಾರಾಟ ನಡೆಸುತ್ತಿದ್ದು, ಶ್ರೀಹರಿಕೋಟಾದಲ್ಲಿ ನಡೆಯುತ್ತಿರುವ 74 ನೇ ಉಡಾವಣೆಯಾಗಿದೆ. ಬಾಹ್ಯಾಕಾಶ ಇಲಾಖೆಯ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ ಸಂಸ್ಥೆಯು ಅಮೆರಿಕಾದ ಜತೆ ಸಹಯೋಗದಿಂದ 13 ವಾಣಿಜ್ಯ ಉದ್ದೇಶದ ನ್ಯಾನೊ ಉಪಗ್ರಹಗಳನ್ನು ತಯಾರಿಸಲಾಗಿದೆ.

ಕಾರ್ಟೊಸ್ಯಾಟ್‌–3 ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಭೂವೀಕ್ಷಣಾ ಉಪಗ್ರಹ. ಅಧಿಕ ಸ್ಪಷ್ಟತೆಯ ಚಿತ್ರಗಳನ್ನು ಸೆರೆ ಹಿಡಿಯಲಿದೆ. ಇದರ ಒಟ್ಟು ತೂಕ 1625 ಕೆ.ಜಿಗಳು. ಐದು ವರ್ಷಗಳವರೆಗೆ ಕಾರ್ಯ ನಿರ್ವಹಿಸುತ್ತದೆ. ನಗದ ಯೋಜನೆ ನಿರೂಪಣೆ, ಗ್ರಾಮೀಣ ಸಂಪನ್ಮೂಲ, ಮೂಲಸೌಕರ್ಯಗಳ ಅಭಿವೃದ್ಧಿಗೆ, ಕಡಲತೀರದ ಭೂಬಳಕೆ ಮತ್ತು ಭೂಪ್ರದೇಶದ ವ್ಯಾಪ್ತಿಯ ಉದ್ದೇಶಗಳಿಗೆ ಇದನ್ನು ಬಳಸಬಹುದಾಗಿದೆ ಎಂದು ಇಸ್ರೊ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT