ಮತಯಂತ್ರ ವಿರುದ್ಧ ಹೋರಾಟ ಚುರುಕು, ವಿರೋಧ ಪಕ್ಷಗಳಿಂದ ಚುನಾವಣಾ ಆಯೋಗಕ್ಕೆ ಭೇಟಿ

ಮಂಗಳವಾರ, ಜೂನ್ 18, 2019
29 °C

ಮತಯಂತ್ರ ವಿರುದ್ಧ ಹೋರಾಟ ಚುರುಕು, ವಿರೋಧ ಪಕ್ಷಗಳಿಂದ ಚುನಾವಣಾ ಆಯೋಗಕ್ಕೆ ಭೇಟಿ

Published:
Updated:

ನವದೆಹಲಿ: ಮತಗಟ್ಟೆ ಸಮೀಕ್ಷೆಗಳ ಫಲಿತಾಂಶ ಹೊರಬೀಳುತ್ತಿದ್ದಂತೆ ವಿರೋಧಪಕ್ಷಗಳವರು ವಿವಿಪ್ಯಾಟ್‌– ಮತಯಂತ್ರ ತಾಳೆ ಕುರಿತ ಹೋರಾಟಕ್ಕೆ ಪುನಃ ಜೀವ ನೀಡಿದ್ದಾರೆ. ವಿವಿಧ ಪಕ್ಷಗಳ ಮುಖಂಡರು ಮಂಗಳವಾರ ಚುನಾವಣಾ ಆಯೋಗವನ್ನು ಭೇಟಿ ಮಾಡಲಿದ್ದು, ‘ಒಂದೇ ಒಂದು ಕಡೆ ಮತಯಂತ್ರ– ವಿವಿಪ್ಯಾಟ್‌ ಮತಗಳಲ್ಲಿ ವ್ಯತ್ಯಾಸ ಕಂಡುಬಂದರೂ ಎಲ್ಲ ವಿವಿಪ್ಯಾಟ್‌ಗಳನ್ನು ತಾಳೆ ಮಾಡಬೇಕು’ ಎಂದು ಒತ್ತಾಯಿಸಲಿದ್ದಾರೆ.

ಚುನಾವಣಾ ಆಯೋಗವನ್ನು ಭೇಟಿ ಮಾಡಲಿರುವ ತಂಡದಲ್ಲಿ ಕಾಂಗ್ರೆಸ್‌, ಟಿಡಿಪಿ, ಟಿಎಂಸಿ, ಸಿಪಿಎಂ, ಸಿಪಿಐ ಮುಂತಾದ ಪಕ್ಷಗಳ ಪ್ರತಿನಿಧಿಗಳು ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

‘ವಿವಿಪ್ಯಾಟ್– ಮತಯಂತ್ರ ತಾಳೆಯಾಗದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚುನಾವಣಾ ಆಯೋಗ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಒಂದೇ ಒಂದು ಕಡೆ ವ್ಯತ್ಯಾಸ ಕಂಡುಬಂದರೂ ಆ ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳ ವಿವಿಪ್ಯಾಟ್– ಮತಯಂತ್ರಗಳ ತಾಳೆ ಮಾಡಬೇಕು’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಸೋಮವಾರ ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.

‘ಇವಿಎಂ– ವಿವಿಪ್ಯಾಟ್‌ ಮತಗಳು ತಾಳೆಯಾಗದಿದ್ದರೆ ಏನು ಮಾಡಬೇಕು ಎಂಬುದನ್ನು ಎಣಿಕೆ ಆರಂಭಿಸುವುದಕ್ಕೂ ಮೊದಲೇ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ನಾವು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಒತ್ತಾಯಿಸಲಿದ್ದೇವೆ’ ಎಂದು ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ ಹೇಳಿದ್ದಾರೆ.

‘ಕನಿಷ್ಠ ಶೇ 50ರಷ್ಟು ವಿವಿಪ್ಯಾಟ್‌ಗಳನ್ನು ಮತಯಂತ್ರದ ಜೊತೆಗೆ ತಾಳೆ ಮಾಡಬೇಕು ಎಂಬ ಒತ್ತಾಯವನ್ನು ಮತ್ತೆ ಮಾಡಲಿದ್ದೇವೆ. ಮತ ಎಣಿಕೆಯ ಆರಂಭದಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದ ಐದು ಮತಗಟ್ಟೆಗಳ ವಿವಿಪ್ಯಾಟ್‌ಗಳ ಎಣಿಕೆ ನಡೆಸಬೇಕು. ಒಂದು ಕಡೆ ವ್ಯತ್ಯಾಸ ಕಂಡುಬಂದರೂ ಎಲ್ಲಾ ವಿವಿಪ್ಯಾಟ್‌ಗಳ ಮತಗಳನ್ನು ತಾಳೆ ಮಾಡಬೇಕು’ ಎಂದು ಟಿಡಿಪಿ ಮುಖ್ಯಸ್ಥ ಎನ್‌.ಚಂದ್ರಬಾಬು ನಾಯ್ಡು ಟ್ವೀಟ್‌ ಮಾಡಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 37

  Happy
 • 0

  Amused
 • 1

  Sad
 • 1

  Frustrated
 • 15

  Angry

Comments:

0 comments

Write the first review for this !