ಸೋಮವಾರ, ಮೇ 25, 2020
27 °C

ಲಂಚ ಕೇಳಿದ ಆರೋಪ: ಸಿಬಿಐನಿಂದ ಇಬ್ಬರು ರೈಲ್ವೆ ಅಧಿಕಾರಿಗಳ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಮಗಾರಿಯೊಂದರ ಬಿಲ್‌ ಪಾವತಿಗೆ ಗುತ್ತಿಗೆದಾರರಿಂದ ₹10 ಲಕ್ಷ ಲಂಚ ಕೇಳಿದ್ದ ಇಬ್ಬರು ಹಿರಿಯ ರೈಲ್ವೆ ಅಧಿಕಾರಿಗಳನ್ನು ಸಿಬಿಐ ಸೋಮವಾರ ಬಂಧಿಸಿದೆ.

ಅಲಹಾಬಾದ್‌ನಲ್ಲಿ ಉತ್ತರ ಕೇಂದ್ರ ರೈಲ್ವೆಯ ಹಿರಿಯ ವಿಭಾಗೀಯ ಸಿಗ್ನಲ್‌ ಮತ್ತು ಟೆಲಿಕಾಂ ಎಂಜಿನಿಯರ್‌ ಆಗಿರುವ ನೀರಜ್‌ ಪುರಿ ಗೋಸ್ವಾಮಿ ಮತ್ತು ವಿಭಾಗೀಯ ಸಿಗ್ನಲ್‌ ಮತ್ತು ಟೆಲಿಕಾಂ ಎಂಜಿನಿಯರ್‌ ಪಿ.ಕೆ.ಸಿಂಗ್‌ ಅವರನ್ನು ಗುತ್ತಿಗೆದಾರರ ದೂರು ಆಧರಿಸಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2017ರ ಮಾರ್ಚ್‌ನಲ್ಲಿ ಆರಂಭಿಸಿದ್ದ ಕಾಮಗಾರಿಯ ಬಿಲ್‌ ಮೊತ್ತ ₹1.43 ಕೋಟಿ ಬಿಡುಗಡೆಗೆ ಈ ಇಬ್ಬರು ಅಧಿಕಾರಿಗಳು ತಲಾ ₹5 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಲಂಚ ನೀಡದಿದ್ದರೆ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ ಎಂದು ಕಾರಣ ನೀಡಿ, ಗುತ್ತಿಗೆ ರದ್ದುಪಡಿಸುವುದಾಗಿಯೂ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿ ಗುತ್ತಿಗೆದಾರರು ದೂರು ನೀಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು